×
Ad

ನಾಥ ಪಂಥ ಜೋಗಿ ಸಮಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾಗಿ ಕೇಶವ ಕೋಟೇಶ್ವರ

Update: 2017-05-18 21:28 IST

 ಉಡುಪಿ, ಮೇ 18: ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾಗಿ ಕೇಶವ ಕೋಟೇಶ್ವರ ಇವರನ್ನು ರಾಜ್ಯ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕೇಶವ ಕೋಟೇಶ್ವರ ಇವರು ಸುಮಾರು 25 ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದು ಇವರ ಸೇವಾಕಾರ್ಯವನ್ನು ಗಮನಿಸಿದ ಅಮೇರಿಕಾದ ಗ್ಲೋಬಲ್ ಪೀಸ್ ಆರ್ಗನೈಸೇಶನ್ ಗೌರವ ಡಾಕ್ಟರೇಟ್ ಪದವಿ ನೀಡಿದೆ.

ಹತ್ತು ಹಲವು ಪ್ರಶಸ್ತಿ ಪಡೆದಿರುವ ಕೇಶವ ಕೋಟೇಶ್ವರ, ಇದೀಗ ಜೋಗಿ ಸಮಾಜದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
52ರ ಹರೆಯದ ಕೇಶವ ಕೋಟೇಶ್ವರ ಅವರು ಈಗ ಕುಂದಾಪುರ ತಾಲೂಕು ಬೇಳೂರು ಗ್ರಾಮದಲ್ಲಿರುವ ಸ್ಪೂರ್ತಿಧಾಮದ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News