×
Ad

ಶ್ರೀಕೃಷ್ಣಮಠದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನ

Update: 2017-05-18 21:35 IST

ಉಡುಪಿ, ಮೇ 18: ಶ್ರೀ ಕೃಷ್ಣಮಠದ ಸುತ್ತುಪೌಳಿಯ ನವೀಕರಣದ ಪ್ರಯುಕ್ತ ಹಮ್ಮಿಕೊಳ್ಳಲಾದ ಅಷ್ಟೋತ್ತರ ಸಹಸ್ರ ರಜತಕಲಶ ಸಹಿತ ಬ್ರಹ್ಮ ಕಲಶೋತ್ಸವ ಗುರುವಾರ ಬೆಳಗ್ಗೆ ಸಡಗರ, ಸಂಭ್ರಮದಿಂದ ಸಂಪನ್ನಗೊಂಡಿತು.

ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿ, ಶ್ರೀವಿಶ್ವಪ್ರಸನ್ನತೀರ್ಥ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ , ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ , ಶ್ರೀ ಈಶಪ್ರಿಯತೀರ್ಥ , ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ , ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ  ಹಾಗೂ ಶ್ರೀಸೋದೆ ಮಠದ ಶ್ರೀವಿಶ್ವವಲ್ಲತೀರ್ಥ  ಕಲಶಪೂಜೆ, ಆವಾಹನಾದಿ ಪೂಜೆಗಳನ್ನು ನಡೆಸಿ ಕೃಷ್ಣನ ಮೂರ್ತಿಗೆ ಅಭಿಷೇಕ ಮಾಡಿದರು.

ಮುಂಜಾನೆ 5 ಗಂಟೆಯೊಳಗೆ ಕಲಶಗಳಲ್ಲಿ ನೀರನ್ನು ಮಧ್ವಸರೋವರದಿಂದ ತಂದಿರಿಸಿದ ಬಳಿಕ ಸುಮಾರು 8:30ರವರೆಗೆ ಕಲಶಪೂಜೆ, ಅಭಿಷೇಕ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಬಣ್ಣಬಣ್ಣದ ಮಂಡಲ ಗಳಿಲ್ಲದೆ ಗೋಮಯ ಉದಕದಿಂದ ಮಂಡಲವನ್ನು ರಚಿಸಿರುವುದು ವಿಶೇಷವಾಗಿತ್ತು. ಪೂಜೆಯಿಂದ ಹಿಡಿದು ಅಭಿಷೇಕದವರೆಗಿನ ಎಲ್ಲಾ ಪ್ರಕ್ರಿಯೆ ಗಳನ್ನು ಸ್ವಾಮೀಜಿಯವರು ನೆರವೇರಿಸಿದರು.

ಸಾವಿರ ಇತರ ಕಲಶವಾದರೆ, ಒಂದು ಪ್ರಧಾನ ಕಲಶವಿತ್ತು. ಇದಲ್ಲದೆ ಕಶಾಯ, ಪಂಚಗವ್ಯ, ಪಂಚಾಮೃತ, ಗಂಧೋದಕ ಮತ್ತು ಕೇಶವಾದಿ ದ್ವಾದಶ ನಾಮಗಳಿಗೆ ತಕ್ಕಂತೆ ಕುಂಕುಮ, ಹರಿದ್ರೋದಕ, ಶೀತೋದಕ ಮೊದಲಾದ ಸುಮಾರು 20 ಬಗೆಯ ಇತರ ಕಲಶಗಳಿದ್ದವು.

ಸಾವಿರ ಇತರ ಕಲಶವಾದರೆ, ಒಂದು ಪ್ರಾನಕಲಶವಿತ್ತು.ಇದಲ್ಲದೆಕಶಾಯ,ಪಂಚಗವ್ಯ,ಪಂಚಾಮೃತ,ಗಂೋದಕ ಮತ್ತು ಕೇಶವಾದಿ ದ್ವಾದಶ ನಾಮಗಳಿಗೆ ತಕ್ಕಂತೆ ಕುಂಕುಮ, ಹರಿದ್ರೋದಕ, ಶೀತೋದಕ ಮೊದಲಾದ ಸುಮಾರು 20 ಬಗೆಯ ಇತರ ಕಲಶಗಳಿದ್ದವು. ಜಾಗದ ಕೊರತೆಯಿಂದ ಹೊರಭಾಗಗಳಲ್ಲಿ ವೇದ, ಭಾಗವತ, ಗೀತೆ ಇತ್ಯಾದಿಗಳ ಪಾರಾಯಣ ನಡೆಯಿತು.

ಸಾರ್ವಜನಿಕರಿಗೆ ಇದನ್ನು ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡಲಾಗಿತ್ತು. ಕೊನೆಯ ಪ್ರಧಾನ ಕಲಶದ ಅಭಿಷೇಕವನ್ನು ಪೇಜಾವರ ಶ್ರೀಗಳು ನಡೆಸಿ ಬಳಿಕ ಮಹಾಪೂಜೆ ನಡೆಸಿದರು.

ಅಪರಾಹ್ನ ಮಠದ ಪಾರ್ಕಿಂಗ್ ಪ್ರದೇಶ, ಕನಕಮಂಟಪ, ಭೋಜನಶಾಲೆ ಗಳಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News