×
Ad

ಮಧ್ವರಿಂದ ಪ್ರಜಾಪ್ರಭುತ್ವ ಪ್ರಯೋಗ: ವೀರಪ್ಪ ಮೊಯ್ಲಿ

Update: 2017-05-18 21:45 IST

ಉಡುಪಿ, ಮೇ 18: ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಪ್ರಜಾಪ್ರಭುತ್ವದ ಪ್ರಯೋಗ ಸಾಧ್ಯ ಎಂಬುದನ್ನು ಉಡುಪಿ ಶ್ರೀಕೃಷ್ಣಮಠದ ಮೂಲಕ ಶ್ರೀಮಧ್ವಾಚಾರ್ಯರು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಾಹಿತಿ ಎಂ.ವೀಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

 ಶ್ರೀಕೃಷ್ಣಮಠದ ಸುತ್ತುಪೌಳಿ ನವೀಕರಣದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ಸಿದ್ಧಾಂತಗಳಲ್ಲಿ ಗೊಂದಲಗಳಿದ್ದಾಗ ಗೊಂದಲಗಳಿಲ್ಲದ, ನಿಖರವಾದ ನಿರ್ಣಯ ಗಳನ್ನು ಮಧ್ವರು ನೀಡಿದರು. ಮಧ್ವರ ಕೃತಿಗಳನ್ನು ವಿಮರ್ಶಾತ್ಮಕವಾಗಿ ಅವಲೋಕನ ಮಾಡಿದಾಗ ಇವರ ಜ್ಞಾನದ ಖನಿಯ ಉತ್ಖನನ ಇನ್ನಷ್ಟು ನಡೆಯಬೇಕಾಗಿದೆ ಎಂದೆನಿಸುತ್ತದೆ ಎಂದು ಮೊಯ್ಲಿ ನುಡಿದರು.

ಶ್ರೀಕೃಷ್ಣಮಠದ ಸುತ್ತುಪೌಳಿ ನವೀಕರಣದ ಅಂಗವಾಗಿ ಗುರುವಾರ ನಡೆದ ದಾರ್ಮಿಕ ಸೆಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ಸಿದ್ಧಾಂತಗಳಲ್ಲಿ ಗೊಂದಲಗಳಿದ್ದಾಗ ಗೊಂದಲಗಳಿಲ್ಲದ, ನಿಖರವಾದ ನಿರ್ಣಯ ಗಳನ್ನು ಮದ್ವರು ನೀಡಿದರು. ಮದ್ವರ ಕೃತಿಗಳನ್ನು ವಿಮರ್ಶಾತ್ಮಕವಾಗಿ ಅವಲೋಕನ ಮಾಡಿದಾಗ ಇವರ ಜ್ಞಾನದ ಖನಿಯ ಉತ್ಖನನ ಇನ್ನಷ್ಟು ನಡೆಯಬೇಕಾಗಿದೆ ಎಂದೆನಿಸುತ್ತದೆ ಎಂದು ಮೊಯ್ಲಿ ನುಡಿದರು.

ಆಚಾರ್ಯತ್ರಯರಲ್ಲಿ ಮಧ್ವರು ಮಾತ್ರ ವೇದಗಳಿಗೆ ವ್ಯಾಖ್ಯಾನ ಬರೆದರು. ಇವರು ಪ್ರತಿಪಾದಿಸಿದ ನವವಿಧ ಭಕ್ತಿ ಮಾರ್ಗ ಸೃಜನಶೀಲತೆಗೆ ಸಹಕಾರಿ. ಕನಕದಾಸರು, ಮೀರಾಬಾಯಿ, ಚೈತನ್ಯರು, ಕಬೀರರು ಇವರಿಂದಲೇ ಪ್ರೇರಣೆ ಪಡೆದವರು. ಸತ್ಯ ಮತ್ತು ವಿಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನ ಒಂದಕ್ಕೊಂದು ಪೂರಕ ಸದಾ ಪ್ರಸ್ತುತವಾದ ರಾಮಾಯಣ, ಮಹಾಭಾರತ ಗ್ರಂಥಗಳಲ್ಲಿ ಕಟ್ಟುಕತೆಗಳು, ಮೂಢನಂಬಿಕೆಗಳು ಸೇರಂತೆ ನೋಡಿಕೊಳ್ಳಬೇಕು ಎಂದರು.

ಆಚಾರ್ಯತ್ರಯರಲ್ಲಿ ಮದ್ವರು ಮಾತ್ರವೇದಗಳಿಗೆ ವ್ಯಾಖ್ಯಾನ ಬರೆದರು. ಇವರು ಪ್ರತಿಪಾದಿಸಿದ ನವ ವಿಧ ಭ ಕ್ತಿ ಮಾರ್ಗ ಸೃಜನ ಶೀಲತೆಗೆ ಸಹಕಾರಿ. ಕನಕದಾಸರು, ಮೀರಾಬಾಯಿ, ಚೈತನ್ಯರು, ಕಬೀರರು ಇವರಿಂದಲೇ ಪ್ರೇರಣೆ ಪಡೆದವರು. ಸತ್ಯ ಮತ್ತು ವಿಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನ ಒಂದಕ್ಕೊಂದು ಪೂರಕ, ಸದಾ ಪ್ರಸ್ತುತವಾದ ರಾಮಾಯಣ, ಮಹಾ ಭಾರತ ಗ್ರಂಥಗಳಲ್ಲಿ ಕಟ್ಟುಕತೆಗಳು, ಮೂಢನಂಬಿಕೆಗಳು ಸೇರದಂತೆ ನೋಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಮಾತನಾಡಿ, ನಾವೆಲ್ಲರೂ ಗುರುತ್ವಾಕರ್ಷಣ ಸಿದ್ಧಾಂತವನ್ನು ಐಸಾಕ್ ನ್ಯೂಟನ್ ಕಂಡುಹಿಡಿದ ಎಂದು ಓದುತ್ತೇವೆ. ಚಂದ್ರನ ಸುತ್ತಳೆತೆಗೆ 108 ರಿಂದ ಗುಣಿಸಿದರೆ ಅದು ಭೂಮಿಗೂ ಚಂದ್ರನಿಗೂ ಇರುವ ದೂರ ಎಂಬುದನ್ನು ಹೆಸರು ಹೇಳದೆ ಕಂಡು ಹಿಡಿದವರು ಭಾರತೀಯರು. ಮಾನವ ಜನಾಂಗಕ್ಕೆ ಭಾರತದ ಕೊಡುಗೆಗಳನ್ನು ನಾವು ನೆನಪಿಸಬೇಕಾಗಿದೆ ಎಂದು ಹೇಳಿದರು.

ಪರ್ಯಾಯ ಶ್ರೀಪೇಜಾವರ ಮಠದ ಉಭಯ ಶ್ರೀಪಾದರು, ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ, ಪ್ರಯಾಗ ಮಠದ ಶ್ರೀಗಳು ಆಶೀರ್ವಚನ ನೀಡಿದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟೀಸ್ ದಿನೇಶ ಕುಮಾರ್ ಶುಭಕೋರಿದರು.
ಪರ್ಯಾಯ ಶ್ರೀಪೇಜಾವರ ಮಠದ ಉಭಯ ಶ್ರೀಗಳು, ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ, ಪ್ರಯಾಗ ಮಠದ ಶ್ರೀಗಳು ಆಶೀರ್ವಚನ ನೀಡಿದರು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟೀಸ್‌ ದಿನೇಶ ಕುಮಾರ್‌ ಶುಕೋರಿದರು. ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ವಿದ್ವಾಂಸ ಡಾ.ಪ್ರಭಂಜನ ವ್ಯಾಸನಕೆರೆ ಉಪನ್ಯಾಸ ನೀಡಿದರು. ಬದರೀನಾಥಾಚಾರ್ಯ, ವಾಸುದೇವ ಭಟ್ ಪೆಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News