ಆ್ಯಂಟನಿ ಅವರಿಗೆ ಡಾಕ್ಟರೇಟ್ ಪದವಿ

Update: 2017-05-18 16:34 GMT

ಬೆಳ್ತಂಗಡಿ, ಮೇ 18: ಕರಾವಳಿ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗೆಗಿನ ನಾಗರಿಕ ಸಮಾಜ ಹಾಗು ಸರಕಾರೇತರ ಸಂಗಟನೆಗಳ ಪ್ರತಿಕ್ರಿಯೆಗಳು, ಅವಿಭಜಿತ ದ. ಕ. ಜಿಲ್ಲೆಯ ಒಂದು ಅಧ್ಯಯನ 1980-2010 ಇದರ ಬಗ್ಗೆ ಮೈಸೂರು ವಿವಿಯು ರಾಜ್ಯ ಶಾಸ್ತ್ರದಲ್ಲಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಆ್ಯಂಟನಿ ಟಿ. ಪಿ. ಅವರು ಪ್ರಸ್ತುತ ಪಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದೆ.

ಮೈಸೂರು ವಿವಿಯ ಪ್ರೋ. ಮುಝಾಫರ್ ಅಸ್ಸಾದಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ದೆಹಲಿಯ ಜವಹರಲಾಲ್ ನೆಹರೂ ವಿವಿಯಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News