×
Ad

ನರಮಾಂಸದ ಹುಸಿ ವದಂತಿ : ಭಾರತೀಯ ರೆಸ್ಟಾರೆಂಟ್ ಬಲವಂತದ ಮುಚ್ಚುಗಡೆ

Update: 2017-05-18 22:56 IST

ಲಂಡನ್,ಮೇ 19: ಲಂಡನ್‌ನಲ್ಲಿರುವ ಭಾರತೀಯ ರೆಸ್ಟಾರೆಂಟ್ ಒಂದರಲ್ಲಿ ಮಾನವ ಮಾಂಸವನ್ನು ಉಣಬಡಿಸಲಾಗಿದೆಯೆಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬಳಿಕ ಅದನ್ನು ಬಲವಂತವಾಗಿ ಮುಚ್ಚಿಸಲಾಗಿದೆಯೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಪೂರ್ವ ಲಂಡನ್‌ನ ‘ಕರಿಟ್ವಿಸ್ಟ್’ ರೆಸ್ಟಾರೆಂಟ್‌ನಲ್ಲಿ ನರಮಾಂಸವನ್ನು ಬಡಿಸಲಾಗಿದೆಯೆಂಬ ವದಂತಿಗಳನ್ನು ಕಿಡಿಗೇಡಿಗಳು ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದರು. ಈದಾದ ನಂತರ ಸ್ಥಳೀಯರು ರೆಸ್ಟಾರೆಂಟ್ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದರೆಂದು ಕರಿಟ್ವಿಸ್ಟ್‌ನ ಮಾಲಕಿ ಶಿನ್ರಾ ಎಂಬವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ದಾಳಿ ಭೀತಿಯ ಹಿನ್ನೆಲೆಯಲ್ಲಿ ರೆಸ್ಟಾರೆಂಟ್ ಮುಚ್ಚಲಾಗಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News