×
Ad

ಅಂತಾರಾಷ್ಟ್ರೀಯ ಶುಶ್ರೂಷಕರ ಕಾರ್ಯಕ್ರಮ

Update: 2017-05-18 23:35 IST

ಮಂಗಳೂರು, ಮೇ 18: ಯೆನೆಪೊಯ ನರ್ಸಿಂಗ್ ಕಾಲೇಜ್, ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈಂಸಸ್, ಶುಶ್ರೂಷ ಸೇವೆ ವಿಭಾಗ, ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮಂಗಳೂರು ಮತ್ತು  ಎಸ್.ಎನ್.ಎ ಜಂಟಿಯಾಗಿ "ಅಂತಾರಾಷ್ಟ್ರೀಯ ಶುಶ್ರೂಷಕರ ವಾರವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಅರಿವಳಿಕೆ ಇಲಾಖೆಯ ಎಚ್.ಒ.ಡಿ. ಡಾ. ಪದ್ಮನಾಭ ಭಾಗವಹಿಸಿದ್ದರು.

ಯೆನೆಪೊಯ ಯೂನಿವರ್ಸಿಟಿಯ ಗೌರವಾನ್ವಿತ ಉಪಕುಲಪತಿ ಡಾ.ಎಂ. ವಿಜಯ ಕುಮಾರ್  ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ. ಶ್ರೀಕುಮಾರ್ ಮೆನನ್, ಡಾ. ಆಶಾ ಪಿ. ಶೆಟ್ಟಿ, ಸಿಸ್ಟರ್ ಐಲೀನ್ ಮಥಿಯಾಸ್ ಉಪಸ್ಥಿತರಿದ್ದರು.

ಒಂದು ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದರ್ಶ ವಾರ್ಡ್ ಆಯ್ಕೆ, ಪೋಸ್ಟರ್ ಮತ್ತು ರಸಪ್ರಶ್ನೆ ಸ್ಪರ್ಧೆ, ಅತಿಥಿ ಉಪನ್ಯಾಸ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಆಯ್ಕೆಯಂತಹ ಸ್ಪರ್ಧಾತ್ಮಕ ಮತ್ತು ಮನೊರಂಜನಾ ಕಾರ್ಯಕ್ರಮ ನಡೆಯಿತು.

ಗ್ರ್ಯಾಂಡ್ ಫೈನಲ್ ಅನ್ನು  ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು. ಸಿಸ್ಟರ್ ಐಲೀನ್ ಮಥಿಯಾಸ್  ಸ್ವಾಗತಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕೆಎಂಸಿ ಆಸ್ಪತ್ರೆಯ ಶ್ರೀಮತಿ ಗ್ರೇಸಿ ಲೋಬೋ ಹಾಗೂ  ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಮೊಹಮ್ಮದ್ ಅಮೀನ್ ವಾನಿ ಉಪಸ್ಥಿತರಿದ್ದರು. ಡಾ. ಆಶಾ ಪಿ.ಶೆಟ್ಟಿ, ಶುಶ್ರೂಷಕರ ದಿನದ ವಿಷಯವನ್ನು ಅನಾವರಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News