ಎಸ್ಐಒ ತೊಕ್ಕೊಟ್ಟು ವತಿಯಿಂದ ಯುವಕರಿಗಾಗಿ ತರಬೇತಿ ಶಿಬಿರ

Update: 2017-05-19 07:05 GMT

ಉಳ್ಳಾಲ, ಮೇ 19: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೇಶನ್ ಆಫ್ ಇಂಡಿಯಾ ತೊಕ್ಕೊಟ್ಟು ವರ್ತುಲದ ವತಿಯಿಂದ "ಶಹಾದತೆ ಹಕ್" ಎರಡು ದಿನದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ವೆಲ್ಫೇರ್ ಪಾರ್ಟಿ ಉಳ್ಳಾಲ ಘಟಕದ ಅಧ್ಯಕ್ಷ ಸಿ.ಎಚ್. ಸಲಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಐಒ ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಅಧ್ಯಕ್ಷೀಯ ಭಾಷಣ ಮಾಡಿದರು. ಮತ್ತೋರ್ವ ಮುಖ್ಯ ಅತಿಥಿ ಜಮಾಅತೆ ಇಸ್ಲಾಮಿ ಉಳ್ಳಾಲ ಅಧ್ಯಕ್ಷ ಅಬ್ದುಲ್ ಕರೀಂ ಮುಖ್ಯ ಪ್ರಭಾಷಣ ಮಾಡಿದರು. ಕೆ.ಮುಹಮ್ಮದ್ ಕುರ್ ಆನ್ ಮತ್ತು ವಿಜ್ಞಾನದ ಬಗ್ಗೆ ಮಾಹಿತಿ ನೀಡಿದರು.

ಎಸ್ಐಒ ರಾಜ್ಯ ಕಾರ್ಯದರ್ಶಿ ದಾನಿಶ್ ಪಾಣೆಮಂಗಳೂರು ಮತ್ತು ಅಕೀಲ್ ಬೆಂಗಳೂರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎಚ್.ಆರ್.ಎಸ್. ರಾಜ್ಯ ಸಂಚಾಲಕ ಮುನೀರ್ ಪದರಂಗಿ ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಆಸಿಫ್ ಇಕ್ಬಾಲ್ "ಗುರಿ ಮತ್ತು ಸಾಧನೆ" ಬಗ್ಗೆ ವಿವರಿಸಿದರು. ರಿಯಾಝ್ ಅಲಿ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಿದ್ದೀಕ್ ಜಕ್ರಿಬೆಟ್ಟು, ಲತೀಫ್ ಅಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಎಸ್ಐಒ ಮಾಜಿ ಅಧ್ಯಕ್ಷ ಮನ್ಸೂರ್, ಮುಷ್ತಾಕ್ ಪಟ್ಲ ಮತ್ತು ಜಿಲ್ಲಾ ಕಾರ್ಯದರ್ಶಿ ನಿಝಾಮ್ ಸಂವಾದ ನಡೆಸಿದರು. ಎಸ್ಐಒ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯಿಲ್ ಕೆ.ಪಿ. ವಿಧ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News