×
Ad

ಉ.ಪ್ರ:ರೋಮಿಯೊ ನಿಗ್ರಹ ದಳಕ್ಕೀಗ ಹೊಸ ಹೆಸರು ‘ನಾರಿ ಸುರಕ್ಷಾ ಬಲ್’

Update: 2017-05-19 15:59 IST

ಲಕ್ನೋ,ಮೇ 19: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ತಡೆಯಲು ಯೋಗಿ ಆದಿತ್ಯನಾಥ ಸರಕಾರವು ಭಾರೀ ಪ್ರಚಾರದೊಂದಿಗೆ ಅಸ್ತಿತ್ವಕ್ಕೆ ತಂದಿರುವ ರೋಮಿಯೊ ನಿಗ್ರಹ ದಳಗಳೀಗ ಹೊಸ ಅವತಾರವನ್ನು ತಳೆದಿವೆ. ಅವುಗಳನ್ನು ಇನ್ನು ಮುಂದೆ ನಾರಿ ಸುರಕ್ಷಾ ಬಲ್(ಮಹಿಳಾ ರಕ್ಷಣಾ ಪಡೆ) ಎಂದು ಕರೆಯಲಾಗುವುದು ಎಂದು ರಾಜ್ಯದ ಸಚಿವ ರಾಜೇಂದ್ರ ಪ್ರತಾಪ ‘ಮೋತಿ ’ಸಿಂಗ್ ಅವರು ತಿಳಿಸಿದ್ದಾರೆ.

ಹೆಸರು ಬದಲಾವಣೆಗೆ ಯಾವುದೇ ಕಾರಣವನ್ನು ಅವರು ತಿಳಿಸಲಿಲ್ಲ. ಆದರೆ ರೋಮಿಯೊ ನಿಗ್ರಹ ದಳಗಳು ತಮ್ಮ ‘ತಪ್ಪು ಬ್ರಾಂಡಿಂಗ್’ನಿಂದಾಗಿ ನಕಾರಾತ್ಮಕ ಪ್ರಚಾರಕ್ಕೆ ತುತ್ತಾಗಿದ್ದವು ಎಂದು ಕೆಲವು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News