ಛತ್ತೀಸ್‌ಗಡ:ಅರಣ್ಯ ವಲಯಕ್ಕೆ ದಿ.ದವೆ ಹೆಸರು
ರಾಯಪುರ,ಮೇ 19: ಛತ್ತೀಸ್‌ಗಡದ ದುರ್ಗ್ ಜಿಲ್ಲೆಯಲ್ಲಿ ಅಭಿವೃದ್ಧಿಗೊಳಿಸಲಾಗಿ ರುವ ಅರಣ್ಯ ವಲಯಕ್ಕೆ ಕೇಂದ್ರ ಪರಿಸರ ಸಚಿವರಾಗಿದ್ದ ಅನಿಲ ಮಾಧವ ದವೆ ಅವರ ಹೆಸರನ್ನಿಡಲಾಗುವುದು ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಶುಕ್ರವಾರ ಪ್ರಕಟಿಸಿದರು. ದವೆ ಗುರುವಾರ ನಿಧನರಾಗಿದ್ದರು.
ತನ್ನ ರಾಜ್ಯವ್ಯಾಪಿ ಲೋಕ ಸುರಾಜ್ ಅಭಿಯಾನದಡಿ ದುರ್ಗ್ ಜಿಲ್ಲೆಯ ಸಂಕ್ರ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿ 41ಹೆಕ್ಟೇರ ವಿಸ್ತೀರ್ಣದಲ್ಲಿ ಅರಣ್ಯ ಇಲಾಖೆಯು ಅಭಿವೃದ್ಧಿಗೊಳಿಸಿರುವ ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭ ಈ ವಿಷಯವನ್ನು ಪ್ರಕಟಿಸಿದರು.
ತನ್ನ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಬೇಡ, ಸಸಿಗಳನ್ನು ನೆಡಬೇಕು ಎನ್ನುವದು ದವೆಯವರ ಬಯಕೆಯಾಗಿತ್ತು. ಈ ಅರಣ್ಯವನ್ನು ಸಾಧ್ಯವಿರುವಷ್ಟು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇಲ್ಲಿ ನೆಡಲಾಗಿರುವ ಸಸಿಗಳು ಮತ್ತು ಮರಗಳಿಗೆ ನೀರುಣಿಸಲು ಸೋಲಾರ್ ಪಂಪ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.