×
Ad

1,180 ಅಂಕ ಗಳಿಸಿದ ಪ್ರತಿಭಾನ್ವಿತೆಯ ಜೀವಕ್ಕೆ ಕುತ್ತಾದ ಮಾಧ್ಯಮಗಳ "ಬಡತನ"ದ ವರದಿ

Update: 2017-05-19 19:08 IST

ಕಣ್ಣೂರು, ಮೇ 19: ಕೇರಳದ ಹಯರ್ ಸೆಕೆಂಡರಿ ಪರೀಕ್ಷೆಯಲ್ಲಿ 1,180 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದ ವಿದ್ಯಾರ್ಥಿನಿಯೋರ್ವಳ ಪ್ರಾಣಕ್ಕೆ ಮಾಧ್ಯಮಗಳು ಪ್ರಕಟಿಸಿ ವರದಿಗಳೇ ಕುತ್ತಾದ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಮನೆಯ ಬಡತನದ ಬಗೆಗಿನ ಮಾಧ್ಯಮಗಳ ಅತಿರಂಜಿತ ವರದಿಗಳಿಂದ ಮನನೊಂದ ಪ್ರತಿಭಾನ್ವಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಣ್ಣೂರಿನ ಮಾಲೂರು ಗ್ರಾಮದ ರಫ್ಸೀನಾ ಕೇರಳದ ಹಯರ್ ಸೆಕೆಂಡರಿ ಪರೀಕ್ಷೆಯಲ್ಲಿ 1,200 ಅಂಕಗಳಲ್ಲಿ 1,180 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾಗ ಇಡೀ ಊರೇ ಸಂಭ್ರಮಿಸಿತ್ತು. ಆದರೆ ಈ ಸಂಭ್ರಮ ಮಾಸುವ ಮುನ್ನವೇ ವಿದ್ಯಾರ್ಥಿನಿಯ ಆತ್ಮಹತ್ಯೆಯ ಸುದ್ದಿ ಗ್ರಾಮಸ್ಥರನ್ನು ಆಘಾತಕ್ಕೀಡು ಮಾಡಿದೆ.

ತನ್ನ ಮನೆಯ ಪರಿಸ್ಥಿತಿಯ ಬಗ್ಗೆ ಸಹಪಾಠಿಗಳೊಂದಿಗೆ ಹೇಳಿರಲಿಲ್ಲ. ಆದರೆ ಮಾಧ್ಯಮಗಳು ಇದನ್ನೇ ಪ್ರಮುಖವಾಗಿ ಪ್ರಕಟಿಸಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೈಯುತ್ತಿರುವುದಾಗಿ ವಿದ್ಯಾರ್ಥಿನಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ಪೆರವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News