×
Ad

ಡೈಮಂಡ್ ಸ್ಟ್ರೋಕ್ಸ್’ ಏಕವ್ಯಕ್ತಿ ಕಲಾಪ್ರದರ್ಶನ ಉದ್ಘಾಟನೆ

Update: 2017-05-19 20:11 IST

ಉಡುಪಿ, ಮೇ 19: ಉಡುಪಿ ಆರ್ಟಿಸ್ಟ್ಸ್ ಫೋರಂ ವತಿಯಿಂದ ಉಡುಪಿ ದೃಷ್ಠಿ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ಹಾವೇರಿ ರಾಣಿಬೆನ್ನೂರಿನ ಕಲಾವಿದ ಶಿವ ಹಾದಿಮನಿ ಅವರ ‘ಡೈಮಂಡ್ ಸ್ಟ್ರೋಕ್ಸ್’ ಮೂರು ದಿನಗಳ ಏಕವ್ಯಕ್ತಿ ಕಲಾಪ್ರದರ್ಶನವನ್ನು ಅಂತಾರಾಷ್ಟ್ರೀಯ ಫ್ಯಾಶನ್ ಡಿಸೈನರ್ ಮಿಲಾನಿ ಗ್ಯಾರಿಯಾನ್‌ ಡೋ ಶುಕ್ರವಾರ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ರಮೇಶ್ ರಾವ್ ಮಾತನಾಡಿ, ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರು ಗಳಿದ್ದರೂ ಉತ್ತಮ ಕಲಾ ವಿಮರ್ಶಕರ ಕೊರತೆ ಬಹಳಷ್ಟು ಇದೆ. ಇದನ್ನು ತುಂಬುವ ಕಾರ್ಯ ಮುಖ್ಯವಾಗಿ ಆಗಬೇಕು ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಶಿರಸಿ ಜಿಎಫ್‌ಜಿಎಸ್‌ನ ಉಪಪ್ರಾಂಶುಪಾಲ ಡಾ. ಆಶಾ ಇಂಗಲಗಿ, ಕಲಾವಿದ ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ಕಲಾವಿದ ಶಿವ ಹಾದಿಮನಿ ಉಪಸ್ಥಿತರಿದ್ದರು. ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಬೀಡು ವಂದಿಸಿದರು.

ಪ್ರದರ್ಶನದಲ್ಲಿ ಅಕ್ರಲಿಕ್ ಮಾಧ್ಯಮದ ಒಟ್ಟು 30 ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಪ್ರದರ್ಶನವು ಮೇ 19ರಿಂದ 21ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 7ರತನಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News