‘ಹವ್ಯಾಸಿಗಳಿಂದ ಯಕ್ಷಗಾನ ಕಲೆ ಪ್ರಬಲ’

Update: 2017-05-19 14:47 GMT

ಉಡುಪಿ, ಮೇ 19: ಆಧುನಿಕತೆಯ ಈ ಕಾಲದಲ್ಲೂ ಯಕ್ಷಗಾನವು ಪ್ರಬಲ ಕಲಾ ಮಾಧ್ಯಮವಾಗಿ ಉಳಿದಿರುವುದಕ್ಕೆ ಹವ್ಯಾಸಿ ಕಲಾವಿದರ ಪರಿಶ್ರಮವೇ ಕಾರಣ ಎಂದು ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಕಿನ್ನಿಮುಲ್ಕಿ ಶ್ರೀವೀರಭದ್ರ ಯಕ್ಷಗಾನ ಕಲಾ ಮಂಡಳಿಯ ಅಷ್ಟಮ ವಾರ್ಷಿಕೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತಿದ್ದರು.

ಈ ಸಂದರ್ಭದಲ್ಲಿ ಬಡಗುತಿಟ್ಟಿನ ಹಿರಿಯ ಭಾಗವತ ಶೀನಪ್ಪ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಗಿರೀಶ್ ಶೆಟ್ಟಿಗಾರ್, ವೀರಭದ್ರ ದೇವಸ್ಥಾನದ ಮೊಕ್ತೇಸರ ಪ್ರಭಾಶಂಕರ, ತರುಣ ವೃಂದದ ಕಾರ್ಯದರ್ಶಿ ನಾಗರಾಜ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಸಂಸ್ಥೆ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಸುಂದರ ಶೆಟ್ಟಿಗಾರ್ ವಂದಿಸಿ ದರು. ಅರವಿಂದ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News