ಉತ್ತರಖಂಡದಲ್ಲಿ ಭಾರೀ ಭೂಕುಸಿತ: 13,500 ಚಾರ್ ಧಾಮ್ ಯಾತ್ರಿಕರು ಸಂಕಷ್ಟದಲ್ಲಿ

Update: 2017-05-19 14:49 GMT

ಡೆಹ್ರಾಡೂನ್, ಮೇ 19: ಇಲ್ಲಿನ ವಿಷ್ಣುಪ್ರಯಾಗದ ಸಮೀಪದ ಹತಿ ಪರ್ವತದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಬದ್ರಿನಾಥದ ಚಾರ್ ಧಾಮ್ ಯಾತ್ರೆಗೆ ತಡೆಯಾಗಿದೆ. ಸುಮಾರು 13,500 ಯಾತ್ರಿಕರು ಸಂಕಷ್ಟದಲ್ಲಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

150 ಮೀಟರ್ ನ ಪ್ರದೇಶ ಭೂಕುಸಿತಕ್ಕೊಳಗಾಗಿದ್ದು, ಹೃಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ಪ್ರದೇಶಕ್ಕೆ ಹಾನಿಯಾಗಿದೆ. ಭೂಕುಸಿತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

“ಬಾರ್ಡರ್ ರೋಡ್ಸ್ ಅಸೋಸಿಯೇಶನ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರವೇ ಸುಗಮ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು” ಎಂದು ಎಸ್ ಪಿ ತೃಪ್ತಿ ಭಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News