ಬ್ಯಾಡ್ಮಿಂಟನ್: ಅಂಚಲ್ -ದೀತ್ಯಾ ಜೋಡಿ ಸೆ.ಫೈನಲ್‌ಗೆ
ಉಡುಪಿ, ಮೇ 19: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಕಾಶ್ ಎಂ.ಕೊಡವೂರು ಸ್ಮಾರಕ ಕರ್ನಾಟಕ ರಾಜ್ಯ ಜ್ಯೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ 17ವರ್ಷ ಕೆಳಗಿನ ಬಾಲಕಿಯರ ಡಬಲ್ಸ್ ನಲ್ಲಿ ಅಂಚಲ್ ಧವನ್ ಮತ್ತು ದೀತ್ಯಾ, ಅನನ್ಯ ಪ್ರವೀಣ್ ಮತ್ತು ರೋಶಿನಿ ವೆಂಕಟ್, ಕೀರ್ತನಾ ಪಿ. ಮತ್ತು ಮೇಧಾ ಶಶಿಧರನ್, ಧೃತಿ ಯತೀಶ್ ಮತ್ತು ತ್ರಿಶಾ ಹೆಗ್ಡೆ ಜೋಡಿ ಸೆಮಿಫೈನಲ್ ಪ್ರವೇಶಿಸಿವೆ.
ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾಗರ್ ಮತ್ತು ನಿಧಿಶ್ರೀ ದೇವದಾಸ ಹಾಗೂ ಗಣೇಶ್ ವಿಠಲ್ ಮತ್ತು ಧರಣಿ ರವಿಕುಮಾರ್ ಜೋಡಿ ತನ್ನ ಎದುರಾಳಿಯನ್ನು ಸೋಲಿಸಿ ಫೈನಲ್‌ಗೆ ಕಾಲಿರಿಸಿವೆ.
17ವರ್ಷ ಕೆಳಗಿನ ಬಾಲಕರ ಡಬಲ್ಸ್‌ನಲ್ಲಿ ಭಾರ್ಗವ್ ಎಸ್. ಮತ್ತು ನಿತೀನ್ ಎಚ್.ವಿ., ಅಭಿಮಾನ್ ಅಂಡೇಕುಲಿ ಮತ್ತು ಪೃಥ್ವಿ ಪೈ, ಅಮನ್ ರೋಡ್ರಿಗಸ್ ಮತ್ತು ಕವಿಶ್ ಚೆಂಗಪ್ಪ, ಕಿಶಲ್ ಗಣಪತಿ ಮತ್ತು ಸನೀತ್ ಡಿ.ಎಸ್., ಚಿರಂಜೀವಿ ರೆಡ್ಡಿ ಮತ್ತು ಸುಹಾಸ್ ವಿ., ನರೆನ್ ಅಯ್ಯರ್ ಮತ್ತು ವಿಶೇಶ್ ಶರ್ಮ, ಅರುಶ್ ಮತ್ತು ಮಾಧವ ನಾಯಕ್ ಜೊಡಿ ಕ್ವಾಟರ್ ಫೈನಲ್‌ಗೆ ತೇರ್ಗಡೆಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.