×
Ad

ಮೇ. 23: ಮಲ್‌ಜಅ ನಿಂದ 1,600 ಕುಟುಂಬಗಳಿಗೆ 50 ಲಕ್ಷ ರೂ. ವೆಚ್ಚದಲ್ಲಿ ರಂಝಾನ್ ಸ್ಪೆಷಲ್ ಕಿಟ್ ವಿತರಣೆ

Update: 2017-05-19 22:02 IST

 ಬೆಳ್ತಂಗಡಿ, ಮೇ 19: ಕೆಳದ 9 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಕಾರ್ಯಾ ಚರಿಸುತ್ತಿರುವ ಮಲ್‌ಜಅ ದಅವಾ ಮತ್ತು ರಿಲೀಫ್ ಸೆಂಟರ್ ವತಿಯಿಂದ ಮೇ 23 ರಂದು 1,600 ಅರ್ಹ ಬಡ ಕುಟುಂಬಗಳಿಗೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಮತ್ತು ಇತರ ಸೇವಾ ಕಾರ್ಯಯೋಜನೆಗಳ ಅನುಷ್ಠಾನ ನಡೆಯಲಿದೆ ಎಂದು ಸಂಸ್ಥೆಯ ಚೆಯರ್ಮೆನ್ ಉಜಿರೆ ತಂಙಳ್ ಮತ್ತು ಜನರಲ್ ಮೆನೇಜರ್ ಶರೀಫ್ ಬೆರ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಯ ವತಿಯಿಂದ ಮಾಸಿಕ ಅಕ್ಕಿ ಪಡೆಯುತ್ತಿರುವ 750 ಕುಟುಂಬಗಳೂ ಸೇರಿ ಜಿಲ್ಲೆಯಿಂದ ಆಯ್ದ, ನೊಂದಾಯಿಸಿಕೊಂಡಿರುವ 1,600 ಕುಟುಂಬಗಳಿಗೆ ರಂಝಾನ್ ಉಪಯೋಗಕ್ಕೆ ಬೇಕಾದ 32 ಬಗೆಯ ಆಹಾರ ಪದಾರ್ಥಗಳುಳ್ಳ 55 ಕೆ. ಜಿ ತೂಕದ ಸ್ಪೆಷಲ್ ಕಿಟ್ ನೀಡಲಾಗುತ್ತಿದೆ. ಇದರಲ್ಲಿ ಮುಸ್ಲಿಮೇತರರೂ ಇದ್ದು ಅವರಿಗೂ ಅಹಾರ ಧಾನ್ಯಗಳ ಕಿಟ್ ನೀಡಲಿದೆ.

ಈಗಾಗಲೇ ಸಂಸ್ಥೆಯ ವತಿಯಿಂದ ಚೆಯರ್ಮೆನ್ ಉಜಿರೆ ತಂಙಳ್ ಮಾರ್ಗದರ್ಶನದಲ್ಲಿ ಶರೀಅತ್ ದರ್ಸ್, ದಅವಾ ಕಾಲೇಜು, ಮಹಿಳೆಯರಿಗೆ ಅಧ್ಯಯನ ಶಿಬಿರ, ಮಲ್‌ಜಅ ಮಹಿಳಾ ಶರೀಅತ್ ಕಾಲೇಜು, ಮಲ್‌ಜಅ ಮಹಿಳಾ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜು, ಡಯಾಲಿಸೀಸ್ ರಿಲೀಫ್, ಸಾದಾತ್ ರಿಲೀಫ್, ಮ್ಯಾರೇಜ್ ಹೆಲ್ಪ್ ಫಂಡ್, ಆರ್ಫನ್ ಹೋಂ ಕೇರ್ ಪದ್ದತಿ, ಮದ್ರಸಗಳಿಗೆ ಆರ್ಥಿಕ ನೆರವು, ಮಾಸಿಕ ಚಿಕಿತ್ಸೆ, ಮುತಅಲ್ಲಿಂ ಸ್ಟೈಫಂಡ್, ಮುಅಲ್ಲಿಂ ಆಶ್ರಯ ನಿಧಿ, ಮದ್ರಸಾ ವಾಹನ ಸೌಲಭ್ಯ, ಶೌಚಾಲಯ ನಿರ್ಮಾಣ, ಮನೆ ದುರಸ್ತಿ ಹಾಗೂ ವಿದ್ಯುತ್ ಸಂಪರ್ಕ, ಶಾಲಾ ಶಿಕ್ಷಣ ಸಹಾಯ ನಿಧಿ, ಆಕಸ್ಮಿಕ ಅಪಘಾತ ರಿಲೀಫ್, ಮಲ್‌ಜಅ ಪಬ್ಲಿಕೇಶನ್, ಸುನ್ನೀವಾಣಿ ಮಾಸಿಕ, ಮೊಬೈಲ್ ಪ್ರವಚನ, ಇಸ್ಲಾಮಿಕ್ ಲೈಬ್ರೆರಿ, ದ್ಸಿಕ್ರ್ -ಸ್ವಲಾತ್ ಮಜ್ಲಿಸ್ ಇತ್ಯಾಧಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದೆ ಎಂದರು.

ರಂಝಾನ್ ಕಿಟ್ ವಿತರಣಾ ಸಮಾರಂಭಕ್ಕೆ ಸಚಿವರಾದ ರೋಷನ್ ಬೇಗ್, ರಮಾನಾಥ ರೈ, ಯು.ಟಿ ಖಾದರ್, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಾಧ್ಯಕ್ಷ ಎಂ.ಎ ಗಫೂರ್, ಯೆನೆಪೊಯ ವಿ. ವಿ ಯ ಕುಲಾಧಿಪತಿ  ಅಬ್ದುಲ್ಲಕುಂಞಿ, ಮರ್ಕರ್ ಶಿಕ್ಷಣ ಸಂಸ್ಥೆಯ ಉಪ ಕುಲಾಧಿಪತಿ ಚುಳ್ಳಿಕ್ಕೋಡು ಸಖಾಫಿ, ಶಾಸಕ ವಸಂತ ಬಂಗೇರ, ಕಣಚ್ಚೂರು ಮೋನು ಹಾಜಿ, ಮುಮ್ತಾಝ್ ಅಲಿ, ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್‌ನ ಶಾಫಿ ಸಅದಿ, ತೋಕೆ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೆಸಿಎಫ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ಶರತ್‌ ಕೃಷ್ಣ ಪಡುವೆಟ್ನಾಯ, ಪ್ರಕಾಶ್ ಶೆಟ್ಟಿ ನೊಚ್ಚ, ಶಿವಪ್ರಸಾದ್ ಅಜಿಲ ಅಳದಂಗಡಿ, ಹರೀಶ್ ಕುಮಾರ್, ಧರಣೇಂದ್ರ ಕುಮಾರ್ ಮೊದಲಾದ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News