×
Ad

ವನ್ನಾಕ್ರೈ ವೈರಸ್ ದಾಳಿಗೆ ತುತ್ತಾದ ಫೈಲ್ ಗಳ ರಕ್ಷಣೆಗೆ ಪರಿಹಾರ ಕಂಡುಕೊಂಡ ಫ್ರೆಂಚ್ ಸಂಶೋಧಕರು

Update: 2017-05-19 22:34 IST

ಫ್ರಾನ್ಸ್, ಮೇ 19: ವನ್ನಾಕ್ರೈ ವೈರಸ್ ಗೆ ತುತ್ತಾಗಿರುವ ವಿಂಡೋಸ್ ಫೈಲ್ ಗಳನ್ನು ರಕ್ಷಿಸಲು ಪರಿಹಾರ ಕಂಡುಹುಡುಕಿರುವುದಾಗಿ ಫ್ರೆಂಚ್ ನ ಸಂಶೋಧಕರು ತಿಳಿಸಿದ್ದಾರೆ.

ಭದ್ರತಾ ಸಂಶೋಧಕರ ತಂಡವೊಂದು ವೈರಸ್ ದಾಳಿಗೆ ತುತ್ತಾಗಿರುವ ಫೈಲ್ ಗಳನ್ನು ಅನ್ ಲಾಕ್ ಮಾಡುವ ತಂತ್ರವೊಂದನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ್ದು, ಹಲವು ಸ್ವತಂತ್ರ ಭದ್ರತಾ ಸಂಶೋಧಕರು ಇದನ್ನು ದೃಢಪಡಿಸಿದ್ದಾರೆ.

ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಈ ತಂತ್ರಜ್ಞಾನ ಫಲ ನೀಡಲಿದೆ. ದಾಳಿಗೆ ತುತ್ತಾಗಿರುವ ನಂತರ ಕಂಪ್ಯೂಟರ್ ಗಳನ್ನು ರಿ ಬೂಟ್ ಮಾಡದಿದ್ದಲ್ಲಿ ಮಾತ್ರವೇ ಈ ತಂತ್ರ ಸಹಕಾರಿಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News