ಮೇ 21: ‘ಶಾಲಿಮಾರ್ ಈಡನ್’ಗೆ ಶಿಲಾನ್ಯಾಸ
Update: 2017-05-19 22:47 IST
ಮಂಗಳೂರು, ಮೇ 19: ಶಾಲಿಮಾರ್ ರಿಯಲ್ಟಿ ಹೋಲ್ಡಿಂಗ್ಸ್ ಸಂಸ್ಥೆಯ ವತಿಯಿಂದ ನಗರದ ಪಾಂಡೇಶ್ವರದಲ್ಲಿ ನಿರ್ಮಿಸಲು ದ್ದೇಶಿಸಿರುವ ‘ಶಾಲಿಮಾರ್ ಈಡನ್’ ನೂತನ ಕಟ್ಟಡ ಸಮುಚ್ಛಯಕ್ಕೆ ಮೇ 21ರಂದು ಬೆಳಗ್ಗೆ 10 ಗಂಟೆಗೆ ಶಿಲಾನ್ಯಾಸ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಮೂಡ ಅಧ್ಯಕ್ಷ ಸುರೇಶ್ ಬಳ್ಳಾಲ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ, ಕಾರ್ಪೊರೇಟರ್ ದಿವಾಕರ್, ಎಂ.ಅಬ್ದುಲ್ ಖಾದರ್ ಮಂಗಳೂರು ಮತ್ತು ಕೆ.ಯೂಸುಫ್ ಸೂರಿಬೈಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.