×
Ad

ನೆಲಬಾಂಬ್ ಸ್ಫೋಟ: ಮಹಿಳೆಯರು, ಮಕ್ಕಳು ಸೇರಿ ಒಂದೇ ಕುಟುಂಬದ 11 ಮಂದಿ ಮೃತ್ಯು

Update: 2017-05-19 23:22 IST

ಕಾಬುಲ್, ಮೇ 19: ನೆಲಬಾಂಬ್ ಸ್ಫೋಟಗೊಂಡು ಮಹಿಳೆಯರು, ಮಕ್ಕಳು ಸೇರಿದಂತೆ ಒಂದೇ ಕುಟುಂಬದ 11 ಮಂದಿ ಮೃತಪಟ್ಟ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.

“ಲೋಗಾರ್ ಪ್ರಾಂತ್ಯದ ಆಘಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಒಂದೇ ಕುಟುಂಬದ ಮಂದಿ ಪ್ರಯಾಣಿಸುತ್ತಿದ್ದ ಕಾರು ನೆಲಬಾಂಬ್ ಗೆ ತಾಗಿದ್ದು, ಈ ಸಂದರ್ಭ ನಡೆದ ಸ್ಫೋಟದಲ್ಲಿ ಐವರು ಮಹಿಳೆಯರು, ಓರ್ವ ವೃದ್ಧ ಹಾಗೂ ಐವರು ಮಕ್ಕಳು ಸಾವನ್ನಪ್ಪಿದ್ದಾರೆ” ಎಂದು ಜಿಲ್ಲಾ ಮುಖ್ಯಸ್ಥ ಮುಹಮ್ಮದ್ ನಾಸಿರ್ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ತಾಲಿಬಾನ್ ಈವರೆಗೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. “ಸರಕಾರಿ ಪಡೆಗಳ ವಿರುದ್ಧ ಉಗ್ರಗಾಮಿಗಳು ಇಂತಹ ನೆಲಬಾಂಬ್ ಗಳನ್ನು ಬಳಸುತ್ತಾರೆ. ಆದರೆ ದುರದೃಷ್ಟವಶಾತ್ ಅಮಾಯಕ ಕುಟುಂಬದ ಸದಸ್ಯರು ಇದಕ್ಕೆ ಬಲಿಯಾಗಿದ್ದಾರೆ” ಎಂದು ಲೋಗಾರ್ ಗವರ್ನರ್ ರ ವಕ್ತಾರ ಸಲೀಮ್ ಸಾಲಿಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News