×
Ad

ಸ್ವಯಂಘೋಷಿತ ಸ್ವಾಮೀಜಿಯ ಮರ್ಮಾಂಗ ಕಟ್: ಕೇರಳ ಸಿಎಂ ಶ್ಲಾಘನೆ

Update: 2017-05-20 15:16 IST

ತಿರುವನಂಪುರಂ, ಮೇ 20: ತನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ್ದ ಸ್ವಯಂಘೋಷಿತ ಸ್ವಾಮೀಜಿಯ ಶಿಶ್ನವನ್ನು ಕತ್ತರಿಸಿರುವ 22ರ ಹರೆಯದ ಯುವತಿಯ ಸಾಹಸವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ.

‘‘ಇದೊಂದು ದಿಟ್ಟ ಹೆಜ್ಜೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಕೊಲ್ಲಂ ಜಿಲ್ಲೆಯ ಆಶ್ರಮವೊಂದರ ಸ್ವಾಮೀಜಿಯೊಬ್ಬರ ಶಿಶ್ನ ಕತ್ತರಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಕೇರಳ ಸಿಎಂ ಉತ್ತರಿಸಿದರು.

ಆರೋಪಿಯ ವಿರುದ್ಧ ಸರಕಾರ ಯಾವ ಕಠಿಣ ಕ್ರಮಕೈಗೊಳ್ಳಲಿದೆ?ಎಂದು ಪ್ರಶ್ನಿಸಿದಾಗ,‘‘ನೀವು ಇದಕ್ಕಿಂತ ಹೆಚ್ಚಿನ ಕ್ರಮವನ್ನು ಬಯಸುತ್ತೀರಾ? ಎಂದು ನಗುತ್ತಾ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News