ಈ ಗ್ರಾಮದ ಎಲ್ಲ ಹತ್ತು ಸಾವಿರ ಜನರ ಜನ್ಮ ದಿನ ಜನವರಿ ಒಂದು !

Update: 2017-05-20 12:12 GMT

ಅಲಹಾಬಾದ್,ಮೇ 20 : ಒಂದು ಗ್ರಾಮದ ವ್ಯಕ್ತಿಯೊಬ್ಬನ ತಂದೆ, ತಾಯಿ, ಮಕ್ಕಳು, ಅಜ್ಜ, ಅಜ್ಜಿ, ನೆರೆಮನೆಯವರು ಹಾಗೂ ಊರಿನವರು, ಹೀಗೆ ಎಲ್ಲರ ಜನನ ದಿನಾಂಕ ಒಂದೇ ಆದರೆ ಹೇಗಾಗಬೇಡ ಹೇಳಿ ? ಇದು ವಿಚಿತ್ರವಾದರೂ ನಿಜ. ಅಲಹಾಬಾದ್ ಸಮೀಪದ ಗುರುಪುರ್ ಎಂಬಲ್ಲಿನ ಕಂಜಸ ಎಂಬ ಗ್ರಾಮದ ಎಲ್ಲರ ಆಧಾರ್ ಕಾರ್ಡುಗಳಲ್ಲಿಯೂ ಅವರ ಹುಟ್ಟಿದ ದಿನಾಂಕ ಜನವರಿ 1 ಆಗಿದೆ.

ಈ ಗ್ರಾಮದಲ್ಲಿ ಸುಮಾರು 10,000 ಜನಸಂಖ್ಯೆಯಿದ್ದು ಆಧಾರ್ ಕಾರ್ಡು ನೋಂದಣಿಗಾಗಿ ಗಂಟೆಗಟ್ಟಲೆ ಸರತಿ ನಿಂತಿದ್ದ ಗ್ರಾಮಸ್ಥರಿಗೆ ಇದೀಗ ಎಲ್ಲರ ಜನನ ದಿನಾಂಕವೂ ಜನವರಿ 1 ಎಂದು ಕಾರ್ಡಿನಲ್ಲಿ ನಮೂದಿತವಾಗಿದ್ದನ್ನು ಕಂಡು ದೊಡ್ಡ ಆಘಾತವೇ ಆಗಿದೆ.

ಉತ್ತರ ಪ್ರದೇಶ ಸರಕಾರದ ಆದೇಶದಂತೆ ಆ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಆಧಾರ್ ಕಾರ್ಡು ಸಂಖ್ಯೆಯನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಶಿಕ್ಷಕರು ಸಂಪರ್ಕಿಸಿದಾಗಲಷ್ಟೇ ಈ ವಿಚಾರ ಬೆಳಕಿಗೆ ಬಂದಿತ್ತು.

ಆಗಿರುವ ತಪ್ಪನ್ನು ಸರಿಪಡಿಸಿ ಎಲ್ಲರಿಗೂ ಹೊಸ ಆಧಾರ್ ಕಾರ್ಡುಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಗ್ರಾಮದ ಮುಖ್ಯಸ್ಥ ರಾಮ್ ದುಲಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News