ವೈದ್ಯರ ಮೇಲೆ ಹಲ್ಲೆ, ಅಪಹರಣಕ್ಕೆ ಖಂಡನೆ
Update: 2017-05-20 17:56 IST
ಮಂಗಳೂರು, ಮೇ 20: ಇತ್ತೀಚೆಗೆ ಯೆನೆಪೊಯ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿ ಅವರನ್ನು ಅಪಹರಿಸಿದ ಘಟನೆಯನ್ನು ಉದ್ಯಮಿ ಅಜಿತ್‌ಕುಮಾರ್ ರೈ ಮಾಲಾಡಿ ಖಂಡಿಸಿದ್ದಾರೆ.
ತಂದೆ-ತಾಯಿ, ಹಿರಿಯರು, ರೈತ, ವೈದ್ಯರನ್ನು ದೇವರ ಸಮಾನವಾಗಿ ಕಾಣುವ ಸುಸಂಸ್ಕೃತ ದೇಶದಲ್ಲಿ ವೈದ್ಯರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಇದೊಂದು ಅಮಾನವೀಯ ಅನಾಗರಿಕ ಘಟನೆಯಾಗಿದೆ. ಎಲ್ಲ ಪ್ರಜ್ಞಾವಂತ ನಾಗರಿಕರು ಇದನ್ನು ಖಂಡಿಸಬೇಕು. ಸಂಘ-ಸಂಸ್ಥೆಗಳು, ನಾಗರಿಕರು ಒಟ್ಟು ಸೇರಿ ಇದರ ವಿರುದ್ಧ ಧ್ವನಿ ಎತ್ತಬೇಕು, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸಂಘಟಿತರಾಗಿ ಕೆಲಸ ಮಾಡಬೇಕಾಗಿದೆ. ಸಮಸ್ತ ನಾಗರಿಕರು ವೈದ್ಯರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.