×
Ad

ಮೇ 21: ಎಚ್‌ಎನ್‌ಸಿ ದುಬೈ ಕ್ಲಿನಿಕ್‌ನ ಮಂಗಳೂರು ಶಾಖೆ ಉದ್ಘಾಟನೆ

Update: 2017-05-20 18:03 IST

ಮಂಗಳೂರು, ಮೇ 20: ದುಬೈಯಲ್ಲಿ ಕಳೆದ 4 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಎಚ್‌ಎನ್‌ಸಿ ಕ್ಲಿನಿಕ್‌ನ ಮಂಗಳೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಮೇ 21ರಂದು ಪೂರ್ವಾಹ್ನ 11ಕ್ಕೆ ನಗರದ ಹೈಲ್ಯಾಂಡ್ ಫಳ್ನೀರ್ ರಸ್ತೆಯಲ್ಲಿರುವ ಫಳ್ನೀರ್ ಹೆಲ್ತ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಎಚ್‌ಎನ್‌ಸಿ ಹೆಲ್ತ್‌ಕ್ಯಾರ್ ಗ್ರೂಪ್‌ನ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ಸಲೀಂ ಹೇಳಿದರು.

ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಶಾಂತರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಎಚ್‌ಎನ್‌ಸಿ ಹೆಲ್ತ್‌ಕ್ಯಾರ್ ಗ್ರೂಪ್‌ನ ಅಧ್ಯಕ್ಷ ಡಾ. ಶಾನಿತ್ ಮಂಗಳಾಟ್ ಅಧ್ಯಕ್ಷತೆ ವಹಿಸುವರು ಎಂದರು.

ಕೆಎಂಸಿ ಕಾಲೇಜಿನ ಡೀನ್ ಡಾ.ಎಂ. ವೆಂಕಟ್ರಾಯ ಪ್ರಭು, ಯೆನೆಪೊಯ ಆಸ್ಪತ್ರೆಯ ನಿರ್ದೇಶಕ ಡಾ. ಮುಹಮ್ಮದ್ ತಾಹಿರ್, ಎ.ಜೆ. ಮೆಡಿಕಲ್ ಕಾಲೇಜಿನ ಡೀನ್ ಡಾ. ಅಶೋಕ್ ಹೆಗ್ಡೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಪ್ರಕಾಶ್ ಆಳ್ವ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಮಂಗಳೂರು ಘಟಕದ ಕೋಶಾಧಿಕಾರಿ ಡಾ. ಜಿ.ಕೆ.ಭಟ್ ಸಂಕಬಿತ್ಲು, ಯೆನೆಪೊಯ ಸಂಸ್ಥೆಯ ನಿರ್ದೇಶಕ ಯೆನೆಪೊಯ ಫರ್ಹಾದ್, ಐಎಂಎ ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕೇರಳದ ಕಣ್ಣೂರಿನಲ್ಲಿ 2008ರಲ್ಲಿ ಆರಂಭಗೊಂಡ ಎಚ್‌ಎನ್‌ಸಿ ಹೆಲ್ತ್‌ಗ್ರೂಪ್ ಸಂಸ್ಥೆಯು ಯುಎಇ ಬರ್ ದುಬೈ, ಶಾರ್ಜಾ, ಅಬು ಹೈಲ್, ಅಲ್ ಖುಝ್ಝೆ, ಕೇರಳದ ಮಟ್ಟನ್ನೂರು, ಕುತ್ತುಪರಂಬಾ, ತಲಚೇರಿ ಮತ್ತು ಕಣ್ಣೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಅಲ್ಲದೆ ಯುಎಇನ ಅಜ್ಮಾನ್ ಹಾಗೂ ಕೇರಳದ ಇರಿಟ್ಟಿ, ಇರಿಕೂರಿನಲ್ಲಿ ನೂತನ ಶಾಖೆಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಡಾ. ಮುಹಮ್ಮದ್ ಸಲೀಂ ಹೇಳಿದರು.

 ಮಂಗಳೂರಿನ ಯೆನೆಪೊಯ ಸ್ಪೆಶಾಲಿಟಿ ಆಸ್ಪತ್ರೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯ ನೀತಿ ನಿಯಮಗಳ ಪ್ರತಿಗಳನ್ನು ಈ ಸಂದರ್ಭ ಪರಸ್ಪರ ಹಸ್ತಾಂತರಿಸಲಾಯಿತು. ಅಲ್ಲದೆ ಎಚ್‌ಎನ್‌ಸಿ ಕ್ಲಿನಿಕ್ ಮತ್ತು ಯೆನೆಪೊಯ ಆಸ್ಪತ್ರೆಯ ಲೋಗೋವನ್ನು ಲೋಕಾರ್ಪಣೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಯೆನೆಪೊಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್, ಯೆನೆಪೊಯ ಆಸ್ಪತ್ರೆಯ ನಿರ್ದೇಶಕ ಯೆನೆಪೊಯ ಜಾವೆದ್, ಎಚ್‌ಎನ್‌ಸಿ ಹೆಲ್ತ್‌ಕೇರ್ ಗ್ರೂಪ್‌ನ ನಿರ್ದೇಶಕ ಶಿಜಾಸ್ ಮಂಗಳಾಟ್, ಸಂಸ್ಥೆಯ ಸಿಇಒ ಬಿನೀಶ್ ಉಪಸ್ಥಿತರಿದ್ದರು.

ಯೆನೆಪೊಯ ಸ್ಪೆಶಾಲಿಟಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ

ಎಚ್‌ಎನ್‌ಸಿ ಸಂಸ್ಥೆಯು ವೈದ್ಯಕೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಹಲವು ಪ್ರಸಿದ್ಧ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಲಾಗಿದೆ. ಈ ಒಡಂಬಡಿಕೆಯು ದೇಶದ ಹಾಗೂ ಪ್ರಪಂಚದ ಎಲ್ಲ ಪ್ರದೇಶದ ಜನರಿಗೂ ಉತ್ತಮ ಆರೋಗ್ಯ ನೀಡುವಲ್ಲಿ ಸಹಕಾರಿಯಾಗಲಿದೆ ಎಂದು ಎಚ್‌ಎನ್‌ಸಿ ಹೆಲ್ತ್‌ಕ್ಯಾರ್ ಗ್ರೂಪ್‌ನ ಅಧ್ಯಕ್ಷ ಡಾ. ಶಾನಿತ್ ಮಂಗಳಾಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News