ಕಲ್ಲುಗುಡ್ಡೆ: ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ
ಉಳ್ಳಾಲ,ಮೇ 20: ಯಂಗ್ ಫ್ರೆಂಡ್ಸ್ ಅಸೋಸಿಯೇಶನ್ (ರಿ) ಬೆಳ್ಮ ಕಲ್ಲುಗುಡ್ಡೆ ಕನಕೂರು ಇದರ 15ನೇ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಕಲ್ಲುಗುಡ್ಡೆ ಮಸ್ಜಿದ್ ತ್ವಾಹಾ ವಠಾರದಲ್ಲಿ ನಡೆಯಿತು.
ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಮಕ್ಕಳಿಗೆ ಪುಸ್ತಕ ವಿತರಿಸಿ, ಬಳಿಕ ಮಾತನಾಡಿ ಮನುಷ್ಯರನ್ನು ಬುದ್ದಿವಂತರನ್ನಾಗಿ ಮಾಡಲು ವಿದ್ಯೆಯಿಂದ ಮಾತ್ರ ಸಾದ್ಯ.ಇಂದು ಪುಸ್ತಕ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಶಾಲೆಗೂ ಊರಿಗೂ ತಂದೆ ತಾಯಂದಿರಿಗೂ ಕೀರ್ತಿ ತರಲಿ ಎಂದು ಹೇಳಿದರು.
ಬೆಳ್ಮ ದೋಟ ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಲ್ ಹಾಜಿ ಅಬ್ದುಲ್ ಅಲ್ ಅಫ್‌ಳಾಲಿ ದುಆ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್, ಉಪಾಧ್ಯರಾದ ಖಾಲೀದ್, ಯಂಗ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಉಮ್ಮರ್ ಫಾರೂಕ್,ರೌಲತುಲ್ ಜನ್ನ ಮದರಸ ಬೆಳ್ಮದೋಟ ಮುಅಲ್ಲಿಮ್ ಖಾಸಿಂ ಮುಸ್ಲಿಯಾರ್, ತ್ವಾಹಾ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಬೋರುಗುಡ್ಡೆ ,ಮಾಜಿ ಅಧ್ಯಕ್ಷರಾದ ಕರೀಮ್ ಮುಸ್ಲಿಯಾರ್, ಇರ್ಷಾದ್ ಮುತಅಲ್ಲಿಮ್ ಉಪಸ್ಥಿತರಿದ್ದರು. ರೌಲತುಲ್ ಜನ್ನ ಮದರಸ ಬೆಳ್ಮದೋಟದ ಸದರ್ ಮುಅಲ್ಲಿಂ ಅಶ್ರಫ್ ಇಂದಾದಿ ಸ್ವಾಗತಿಸಿದರು,ಉಮ್ಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.