ಮೇ 22: ಆರ್ಟಿಕ್ ಫರ್ನಿಚರ್, ಇಂಟೀರಿಯರ್ಸ್ ಹೊಸ ಶೋರೂಮ್ ನಂತೂರ್‌ನಲ್ಲಿ ಉದ್ಘಾಟನೆ
ಮಂಗಳೂರು, ಮೇ 20: ಕಳೆದ 4 ವರ್ಷಗಳಿಂದ ಕೇರಳ-ಕಾಸರಗೋಡಿನಲ್ಲಿ ಫರ್ನಿಚರ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಆರ್ಟಿಕ್ ಫರ್ನಿಚರ್ಸ್ ಇದರ ಹೊಸ ಶೋರೂಮ್ 'ಆರ್ಟಿಕ್ ಫರ್ನಿಚರ್' ನಗರದ ನಂತೂರ್ ಸಮೀಪವಿರುವ ಆಲ್ವಾರಿಸ್ ಸೆಂಟರಿನಲ್ಲಿ ಮೇ 22ರಂದು ಬೆಳಗ್ಗೆ 10 ಗಂಟೆಗೆ ಸಚಿವ ರಮಾನಾಥ ರೈ ಮತ್ತು ಸಚಿವ ಯು.ಟಿ.ಖಾದರ್ ಇವರಿಂದ ಮಂಗಳೂರಿನಲ್ಲಿ ಅತೀ ದೊಡ್ಡ ಫರ್ನಿಚರ್ ಶೋರೂಮ್ಉ ದ್ಘಾಟನೆಯಾಗಲಿದೆ.
ಆರ್ಟಿಕ್ ಫರ್ನಿಚರ್‌ನಲ್ಲಿ ಕೇರಳಿಯರ ಅತ್ಯಾಧುನಿಕ ಮತ್ತು ಟ್ರೆಡಿಶನಲ್ ಶೈಲಿಯ ಗೃಹಪಯೋಗದ ಮತ್ತು ಆಫೀಸ್ ಫರ್ನಿಚರ್‌ಗಳ ವಿಶೇಷ ಸಂಗ್ರಹವಿರಲಿದೆ. ಮನೆ ಹಾಗೂ ಕಚೇರಿಗಳಿಗೆ ಆಧುನಿಕ ರೂಪ ನೀಡಲು ಸೂಕ್ತವಾದ, ಅತ್ಯಾಧುನಿಕ ಶೈಲಿಗಳಲ್ಲಿ ಕಾರ್ಯನಿರ್ವಹಿಸುವ, ಅದ್ಭುತ ವಿನ್ಯಾಸಗಳ, ಮನಸ್ಸಿಗೆ ಮುದನೀಡುವ, ದೋಷರಹಿತ ಫಿನಿಶಿಂಗ್‌ನಿಂದ ತಯಾರಿಸಲ್ಪಟ್ಟ ಪೀಠೋಪಕರಣಗಳು ಸುಮಾರು 20,000 ಚದರ ಅಡಿಯ ಶೋರೂಂನಲ್ಲಿ ಲಭ್ಯವಿರಲಿದ್ದು, ಆಯ್ಕೆಗೆ ವಿಫುಲ ಅವಕಾಶಗಳನ್ನು ಹೊಂದಿರುವ ಅಪಾರ ಸಂಗ್ರಹವಿರಲಿದೆ. ಯಾವುದೇ ಗ್ರಾಹಕನ ಅಭಿರುಚಿಗೆ ತಕ್ಕಂತಹ ಸ್ಟೈಲ್ ಹಾಗೂ ಬಜೆಟ್‌ಗೆ ಖರೀದಿಯು ಹೊಂದಿಕೊಳ್ಳಲಿದೆ. ತರಬೇತಿ ಹೊಂದಿರುವ ವೃತ್ತಿಪರ ಸೇಲ್ಸ್‌ಟೀಮ್‌ನಿಂದ ಗ್ರಾಹಕರಿಗೆ ಖರೀದಿಗೆ ತಕ್ಕುದಾದ ಅನುಭವಸ್ಥ ಸೇವೆ ಮತ್ತು ತೃಪ್ತಿದಾಯಕ ಖರೀದಿ ಅನುಭವ ಲಭಿಸುವುದು ಎಂದಿದ್ದಾರೆ.
ವುಡನ್, ಸ್ಟೀಲ್, ಕಬ್ಬಿಣದ ಫರ್ನಿಚರ್-ಸೋಫಾ, ಬೆಡ್, ಟೇಬಲ್, ವಾರ್ಡ್‌ರೋಬ್, ಕಪಾಟು, ಡೈನಿಂಗ್ ಟೇಬಲ್, ಚೇರ್ಸ್, ಅಲ್‌ಮೈರಾಗಳು-ಲಿವಿಂಗ್, ಕಿಚನ್, ಡೈನಿಂಗ್, ಬೆಡ್‌ರೂಮ್‌ಗಳಿಗೆ ವಿವಿಧ ಶ್ರೇಣಿಗಳಲ್ಲಿ ಹಾಗೂ ಬೇಕಾದ ಸೈಜುಗಳಲ್ಲಿ ಲಭಿಸಲಿವೆ. ಆಕರ್ಷಕ ಇಂಟೀರಿಯರ್ಸ್ ಸಲಹೆ ಮತ್ತು ಸಾಮಾಗ್ರಿಗಳು, ಮ್ಯಾಟ್ರೆಸ್‌ಗಳು ಲಭ್ಯವಿದ್ದು, ಆಫೀಸ್ ಮತ್ತು ಕಚೇರಿಗಳ ಶೃಂಗಾರಕ್ಕೆ ಸ್ಟಫ್ ದೊರೆಯಲಿರುವುದು.
ಆರ್ಟಿಕ್ ಫರ್ನಿಚರ್ 4 ವರ್ಷಗಳಲ್ಲಿ ಮೂರನೇ ಮಳಿಗೆ ತೆರೆಯುವ ಮತ್ತು ಸಂಸ್ಥೆಯ ಏಳಿಗೆಗೆ ಕಾರಣವಾದ ಪ್ರಮುಖ ಅಂಶವೇ ಸಂಸ್ಥೆಯಿಂದ ಗ್ರಾಹಕರಿಗೆ ಖರೀದಿಗೆ ದೊರೆಯುವ ಉತ್ತಮ ಸೇವೆ, ಖರೀದಿ ಬಳಿಕ ಮತ್ತು ರಿಪೇರಿಗೆ, ಮೆಂಟೆನೆನ್ಸ್‌ಗೆ ಲಭಿಸುತ್ತಿರುವ ಸೇವೆಯಿಂದಾಗಿ ಅತ್ಯಲ್ಪ ಅವಧಿಯಲ್ಲಿ ತೃಪ್ತಿದಾಯಕ ಗ್ರಾಹಕರ ದೊಡ್ಡ ಸಂಖ್ಯೆಯನ್ನು ಸಂಸ್ಥೆಯು ಸಂಪಾದಿಸಿದೆ.
ಖರೀದಿದಾರರ ಅನುಕೂಲಕ್ಕೆ ವಿವಿಧ ಹಣಕಾಸಿನ ಸೌಲಭ್ಯಗಳು, 0% ಬಡ್ಡಿ, ಕಂತುಗಳಲ್ಲಿ ಪಾವತಿ, ಪ್ರತೀ ಗ್ರಾಹಕನ ಅನುಕೂಲಕ್ಕೆ ತಕ್ಕಂತಹ ಹಣಕಾಸಿನ ವ್ಯವಸ್ಥೆಗಳೂ ಇಲ್ಲಿ ಲಭ್ಯವಿದ್ದು, ಆರಾಮದಾಯಕ ಖರೀದಿಗೆ ವಿಶಾಲ ಸ್ಥಳಾವಕಾಶ, ಪಾರ್ಕಿಂಗಿಗೆ ವಿಶಾಲವಾದ ಸ್ಥಳಾವಕಾಶವಿರುವ ಆರ್ಟಿಕ್ ಶೋರೂಮ್ ಪ್ರತೀ ಗ್ರಾಹಕರ ಸಂತೃಪ್ತಿಗೆ ಕಾರಣವಾಗುವ ಗುರಿಯೊಂದಿಗೆ ಮೇ 22ರಂದು ಶುಭಾರಂಭಗೊಳ್ಳಲಿದೆ.
ಶೋರೂಂ ಉದ್ಘಾಟನಾ ಸಮಾರಂಭದ ಪ್ರಯುಕ್ತ ಫರ್ನಿಚರ್ ಗಳ ಮೇಲೆ ಉತ್ತಮ ಆಫರ್ಸ್‌ಗಳು ಲಭ್ಯವಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: articfurnituremng@gmail.com ಸಂಪರ್ಕಿಸಬಹುದು.