ಡಾಕ್ಟರೇಟ್ ಪದವಿ
Update: 2017-05-20 19:21 IST
ಉಳ್ಳಾಲ, ಮೇ 20: ಮಣಿಪಾಲ ತಾಂತ್ರಿಕ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೋಹನ್‌ದಾಸ್ ಅವರು ಎಮ್.ಐ.ಟಿ. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ರಮೇಶ ಸಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ’ಎ ಸ್ಟಡಿ ಆನ್ ಇಂಟಗ್ರಲ್ ಆಪರೇಟರ್ಸ್ ಡಿಫೈನ್ಡ್ ಆನ್ ಯೂನಿವೇಲಂಟ್ ಫಂಕ್ಷನ್ಸ್ ಅಂಡ್ ರಿಲೇಟೆಡ್ ಕ್ಲಾಸಸ್’ ಸಂಶೋಧನ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮೋಹನ್‌ದಾಸ್ ತಲಪಾಡಿಯ ಬಜಂಗ್ರೆ ಲಕ್ಷ್ಮೀ ಮತ್ತು ನಾರಾಯಣ ಮೂಲ್ಯ ದಂಪತಿಯ ಪುತ್ರರಾಗಿರುತ್ತಾರೆ.