×
Ad

ಡಾ.ವಾರಿಜಾ, ಡಾ.ಪದ್ಮನಾಭ ಕೇಕುಣ್ಣಾಯರಿಗೆ ‘ಉಪಾಧ್ಯಾಯ ಪ್ರಶಸ್ತಿ’

Update: 2017-05-20 19:43 IST

ಉಡುಪಿ, ಮೇ 20: ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನೀಡುವ 2017ನೆ ಸಾಲಿನ ಡಾ.ಸುಶೀಲಾ ಉಪಾಧ್ಯಾಯ ಮತ್ತು ಡಾ.ಯು.ಪಿ.ಉಪಾಧ್ಯಾಯ ಸಂಶೋಧನಾ ಪ್ರಶಸ್ತಿಗೆ ಕ್ರಮವಾಗಿ ಹಿರಿಯ ಸಂಶೋಧಕರು ಹಾಗೂ ಲೇಖಕರಾಗಿರುವ ಡಾ.ವಾರಿಜಾ ಎನ್. ಮತ್ತು ಡಾ. ಪದ್ಮನಾಭ ಕೇಕುಣ್ಣಾಯ ಆಯ್ಕೆಯಾಗಿದ್ದಾರೆ.

ಜೂ.10ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಶಸ್ತಿಯು ತಲಾ 10, ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಹಿರಿಯ ಸಂಶೋಧಕಿ ಯಾಗಿದ್ದ ದಿ.ಡಾ.ಸುಶೀಲಾ ಉಪಾಧ್ಯಾಯ ಹೆಸರಿನಲ್ಲಿ ಪ್ರಪ್ರಥಮ ಬಾರಿಗೆ ನೀಡಲಾಗುತ್ತಿರುವ ಪ್ರಶಸ್ತಿಗೆ ಭಾಷಾ ಶಾಸ್ತ್ರದಲ್ಲಿ ವಿಶೇಷ ಕೆಲಸ ಮಾಡಿರುವ ಡಾ.ವಾರಿಜಾ ಎನ್. ಹಾಗೂ ಹಿರಿಯ ವಿದ್ವಾಂಸರಾಗಿರುವ ಡಾ.ಯು.ಪಿ. ಉಪಾಧ್ಯಾಯ ಸಂಶೋಧನ ಪ್ರಶಸ್ತಿಗೆ ಡಾ.ಪದ್ಮನಾಭ ಕೇಕುಣ್ಣಾಯ ಆಯ್ಕೆ ಯಾಗಿದ್ದಾರೆ ಎಂದು ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಹಾಗೂ ಸಹ ಸಂಯೋಜಕ ಡಾ.ಅಶೋಕ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ವಾರಿಜಾ ಎನ್. ಸಂಶೋಧನೆ, ಭಾಷಾಶಾಸ್ತ್ರ, ಮಕ್ಕಳಸಾಹಿತ್ಯ, ಜಾನಪದ ಕುರಿತಾಗಿ ಆಸಕ್ತಿ ಬೆಳೆಸಿಕೊಂಡಿರುವ ಇವರು ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಭಾಲವಾಲಿಕರ್ ಸಾರಸ್ವತ ಬ್ರಾಹ್ಮಣರ ಕುರಿತಾಗಿ ವಿಶೇಷ ಅಧ್ಯಯನ ನಡೆಸಿ ರುವ ಇವರು ಹಲವಾರು ಮಹತ್ವದ ಲೇಖನ, ಕೃತಿಗಳನ್ನು ಪ್ರಕಟಿಸಿದ್ದಾರೆ.

ತುಳು ನಿಘಂಟುವಿನ ರಾಚನಿಕ ಸ್ವರೂಪವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಕೇಕುಣ್ಣಾಯ, ಸಂಶೋಧಕರೂ, ಲೇಖಕರೂ ಆಗಿದ್ದಾರೆ. ಇವರ ‘ಎ ಕಂಪ್ಯಾರೆಟಿವ್ ಡಯಲೆಕ್ಟ್ಸ್ ಆಫ್ ತುಳು’ ಮಹಾಪ್ರಬಂಧಕ್ಕೆ 1991 ರಲ್ಲಿ ಡಾಕ್ಟರೇಟ್ ಪದವಿ ಲಭಿಸಿದೆ.

ಅಗಸ್ಟ್ ಮ್ಯಾನರ್, ತುಳು ಭಾಷಾ ಪ್ರಭೇದಗಳು ಮತ್ತು ಇತರ ಪ್ರಬಂಧಗಳು, ಕಾವೇರಿ, ಕರಾವಳಿಯ ಭಾಷಾನು ಸಂಧಾನ ಇವರ ಪ್ರಕಟಿತ ಕೃತಿಗಳು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News