×
Ad

ಉಡುಪಿಯಲ್ಲಿ ಸಾವಯವ ಸಂತೆ: ಜಿಲ್ಲಾಧಿಕಾರಿ ಪ್ರಿಯಾಂಕ

Update: 2017-05-20 19:52 IST

ಉಡುಪಿ, ಮೇ 20: ಉಡುಪಿಯ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಸಾವಯವ ಉತ್ಪನ್ನಗಳ ಮಾರಾಟ ‘ಸಾವಯವ ಸಂತೆ’ಯನ್ನು ಜೂನ್ ತಿಂಗಳಲ್ಲಿ ಏರ್ಪಡಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸಾವಯವ ಸಂತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪ್ರಸ್ತುತ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ನಕಲಿ ಸಾವಯವ ಉತ್ಪನ್ನಗಳ ಮಾರಾಟ ಮತ್ತು ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ತಡೆಯಲು, ಸಾವಯವ ಬೆಳೆ ಬೆಳೆ ಯುವ ರೈತರಿಗೆ ಉತ್ತೇಜನ ನೀಡಲು ಮತ್ತು ಜನತೆಗೆ ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನಗಳನ್ನು ದೊರಕಿಸುವ ಉದ್ದೇಶದಿಂದ ಸಾವಯವ ಸಂತೆ ಆಯೋಜಿಸಲಾಗಿದೆ ಎಂದರು.

 ವಾರದ ಪ್ರತಿ ರವಿವಾರ ಸಂತೆ ನಡೆಯಲಿದ್ದು, ಬೇಡಿಕೆ ಅಧಿಕವಾಗಿದ್ದಲ್ಲಿ ವಾರದಲ್ಲಿ 2 ದಿನ ಸಂತೆ ನಡೆಸಲಾಗುವುದು. ಈ ಸಂತೆಯಲ್ಲಿ ಸಾವಯವ ಕೃಷಿಯಲ್ಲಿ ರೈತರು ಬೆಳೆದ ತರಕಾರಿ ಮತ್ತು ಇತರೆ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಸಾವಯವ ಬೆಳೆ ಬೆಳೆಯುವ ನೊಂದಾಯಿತ ರೈತರು ತಮ್ಮ ಬೆಳೆಗಳನ್ನು ತಂದು ಮಾರಾಟ ಮಾಡಬಹುದು. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡು ವುದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಅಲ್ಲದೇ ಗ್ರಾಹಕರಿಗೆ ತಾಜಾ ಮತ್ತು ಗುಣಮಟ್ಟದ ಸಾವಯವ ತರಕಾರಿ ದೊರೆಯಲಿದೆ ಎಂದು ಅವರು ತಿಳಿಸಿದರು.

 ಸಂತೆಯಲ್ಲಿ ಜಿಲ್ಲೆಯ ರೈತರು ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲಿ ಬೆಳೆಯುವ ವಿಶಿಷ್ಟ ಸಾವಯವ ಉತ್ಪನ್ನಗಳ ಮಾರಾಟಕ್ಕೂ ಸಹ ಅವಕಾಶವಿದೆ. ಉಡುಪಿ ಸಾವಯವ ಮಾರಾಟ ಫೆೆಡರೇಷನ್ ವತಿಯಿಂದ ಮಾರಾಟಕ್ಕೆ ವ್ಯವಸ್ಥೆ ಮಾಡ ಲಾಗಿದೆ. ಆರೋಗ್ಯದ ದೃಷ್ಠಿಯಿಂದ ಸಾವಯವ ಉತ್ಪನ್ನಗಳ ಬಳಕೆ ಉತ್ತಮವಾ ಗಿದೆ ಎಂದು ಅವರು ಹೇಳಿದರು. ಸಂತೆ ಏರ್ಪಡಿಸಲು ರೈತರಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಉತ್ಪನ್ನಗಳ ಮಾರಾಟ ಮಾಡುವ ರೈತರು ತಮ್ಮ ಉತ್ಪನ್ನಗಳ ಕುರಿತು ಮಾಹಿತಿಯ್ನು ಇಲಾಖೆಗೆ ನೀಡಬೇಕು ಎಂದರು.

ಉಡುಪಿ ಜಿಲ್ಲಾ ಸಾವಯವ ಪೆಡರೇಷನ್ ಅಧ್ಯಕ್ಷ ದೇವದಾಸ ಹೆಬ್ಬಾರ್ ಮಾತನಾಡಿ, ಫೆಡರೇಷನ್ ವತಿಯಿಂದ ಈಗಾಗಲೇ ಸಾವಯವ ಕುಚ್ಚಿಗೆ ಅಕ್ಕಿ, ತೆಂಗಿನ ಎಣ್ಣೆ, ಗೇರು ಬೀಜಗಳ ಮಾರಾಟಕ್ಕೆ ವ್ಯವಸ್ಥೆಯಿದ್ದು, ಬೇರೆ ಜಿಲ್ಲೆಗಳಿಂದ ಲಭ್ಯವಿರುವ ಇತರೆ ಸಾವಯವ ಉತ್ಪನ್ನಗಳನ್ನು ಈ ಸಂತೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

 ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯಕ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಹನು ಮಂತಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ತೋಟಗಾರಿಕೆ, ಪಶುಪಾಲನೆ ಹಾಗೂ ಇತರೆ ಇಲಾಖಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News