ಭಯೋತ್ಪಾದನಾ ವಿರೋಧಿ ದಿನಾಚರಣೆ
Update: 2017-05-20 19:54 IST
ಉಡುಪಿ, ಮೇ 20: ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಭಯೋತ್ಪಾದನಾ ವಿರೋಧಿ ದಿನವನ್ನು ಇಂದು ಸಾಲಿಗ್ರಾಮದಲ್ಲಿ ಆಚರಿಸ ಲಾಯಿತು.
ಅಧ್ಯಕ್ಷೆ ರತ್ನ ನಾಗರಾಜ ಗಾಣಿಗ ದಿನದ ವಿಶೇಷತೆಯನ್ನು ತಿಳಿಸಿದರು. ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್, ಸದಸ್ಯರಾದ ಶಿವ ಪೂಜಾರಿ, ಸಂಜೀವ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನವನ್ನು ಸಿಬ್ಬಂದಿ ಚಂದ್ರಶೇಖರ ಸೋಮ ಯಾಜಿ ವಾಚಿಸಿದರು.