ಖಾಲಿದ ಝಿಯ ಕಚೇರಿ ಮೇಲೆ ಪೊಲೀಸರ ದಾಳಿ

Update: 2017-05-20 15:01 GMT

 ಢಾಕ, ಮೇ 20: ಬಾಂಗ್ಲಾ ದೇಶದ ಮಾಜಿ ಪ್ರಧಾನಿ, ವಿಪಕ್ಷ ನಾಯಕಿ ಖಾಲಿದ ಝಿಯ ಅವರ ಕಚೇರಿ ಮೇಲೆ ದಾಳಿ ನಡೆಸಿರುವ ಪೊಲೀಸರು ‘ರಾಷ್ಟ್ರವಿರೋಧಿ’ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದು, ಇದನ್ನು ಪ್ರತಿಭಟಿಸಿ ಅವರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದರು.

ಗುಲ್ಷನ್ ಪ್ರದೇಶದಲ್ಲಿರುವ ಬಾಂಗ್ಲಾದೇಶ್ ನ್ಯಾಷನಲಿಷ್ಟ್ ಪಾರ್ಟಿ(ಬಿಎನ್‌ಪಿ) ಕಚೇರಿ ಮೇಲೆ ದಾಳಿ ನಡೆಸಿದ 12ಕ್ಕೂ ಹೆಚ್ಚಿನ ಪೊಲೀಸರು ಸುಮಾರು 2 ಗಂಟೆಗಳ ಕಾಲ ದಾಖಲೆ ಪತ್ರಗಳಿಗಾಗಿ ಹುಡುಕಾಡಿದರು. ಆದರೆ ಬರಿಗೈಯಲ್ಲಿ ಮರಳಿದ್ದಾರೆ ಎಂದು ತಿಳಿದುಬಂದಿದೆ.

 ಝಿಯಾ ವಿರುದ್ಧ ರಾಷ್ಟ್ರದ್ರೋಹದ ಆರೋಪ ಹೊರಿಸಿರುವ ಅನಾಮಧೇಯ ವ್ಯಕ್ತಿಯ ಡೈರಿಯೊಂದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು, ಯಾವುದೇ ವಾರಂಟ್ ಇಲ್ಲದೆ ದಾಳಿ ನಡೆಸಿರುವುದಾಗಿ ಬಿಎನ್‌ಪಿ ಆರೋಪಿಸಿದೆ. ಝಿಯಾರಿಗೆ ಪೀಡನೆ ನೀಡುವ ಮತ್ತು ಬಿಎನ್‌ಪಿಯನ್ನು ಮುಗಿಸಿ ಬಿಡುವ ಆಡಳಿತ ಪಕ್ಷದ ಪಿತೂರಿಯ ಭಾಗವಾಗಿ ಈ ದಾಳಿ ನಡೆದಿದೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News