ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ

Update: 2017-05-20 15:12 GMT

ಉಡುಪಿ, ಮೇ 20: ಆಚಾರ್ಯ ಮಧ್ವರ ಸೋದರ ಶ್ರೀವಿಷ್ಣುತೀರ್ಥಾಚಾರ್ಯರಿಂದ ಆರಂಭಗೊಂಡ ಸೋದೆ ಮತ್ತು ಸುಬ್ರಹ್ಮಣ್ಯ ಮಠಗಳು ಕಾರಣಾಂತರ ಗಳಿಂದ ಸಂಪರ್ಕ ಕಡಿದುಕೊಂಡಿದ್ದು ಇದೀಗ ಉಭಯ ಮಠಗಳ ಐತಿಹಾಸಿಕ ಸಮಾಗಮಕ್ಕೆ ಕಾಲ ಕೂಡಿಬಂದಿದೆ. ಸುಮಾರು 250 ವರ್ಷಗಳ ಬಳಿಕ ಉಭಯ ಮಠಗಳು ಒಂದಾಗುತ್ತಿದ್ದು, ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಕಲ್ಪದಂತೆ ಮೇ 29ರಂದು ಉಭಯ ಮಠಗಳ ಯತಿ ಗಳು ಉಡುಪಿ ಶ್ರೀಅನಂತೇಶ್ವರ ದೇವರ ಸನ್ನಿಧಿಯ ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ಸಮಾಗಮಗೊಳ್ಳಲಿರುವರು. ಈ ಸಂದರ್ಭದಲ್ಲಿ ಪರ್ಯಾಯ ಪೇಜಾವರ ಸ್ವಾಮೀಜಿ, ಕಿರಿಯ ಯತಿ, ಕೃಷ್ಣಾಪುರ ಸ್ವಾಮೀಜಿ, ಪಲಿಮಾರು ಸ್ವಾಮೀಜಿ, ಕಾಣಿಯೂರು ಸ್ವಾಮೀಜಿ, ಅದಮಾರು ಹಿರಿಯ ಮತ್ತು ಕಿರಿಯ ಸ್ವಾಮೀಜಿ ಭಾಗವಹಿಸಲಿರುವರು. ಬಳಿಕ 10ಗಂಟೆಗೆ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮೇ 30ರ ಅಪರಾಹ್ನ 4 ಗಂಟೆಗೆ ಸುಬ್ರಹ್ಮಣ್ಯ ಮಠಾಧೀಶರು ಸೋಂದಾ ಕ್ಷೇತ್ರ ಪುರಪ್ರವೇಶ ಮಾಡಲಿದ್ದು ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯ ಲಿದೆ. ಮೇ 31ರಂದು ಸೋದೆ ಮಠಾಧೀಶರು ಸುಬ್ರಹ್ಮಣ್ಯ ಕ್ಷೇತ್ರ ಪುರಪ್ರವೇಶ ಮಾಡಲಿದ್ದು, ಜೂ.1ರಂದು ಸುಬ್ರಹ್ಮಣ್ಯಮಠದಲ್ಲಿ ಉಭಯ ಸ್ವಾಮೀಜಿಗಳಿಂದ ಸಂಸ್ಥಾನ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News