ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
Update: 2017-05-20 21:22 IST
ಉಡುಪಿ, ಮೇ 20: ಬನ್ನಂಜೆ ಲಕ್ಕುಂಡಿ ದೇವಸ್ಥಾನ ಬಳಿಯ ನಿವಾಸಿ ಬಸವರಾಜ್ (30) ಎಂಬವರು ಮೇ 17ರಂದು ತನ್ನ ಸ್ವಂತ ಊರಾದ ಬಳ್ಳಾರಿ ಜಿಲ್ಲೆಯ ವಡ್ಡರಹಳ್ಳಿ ಹೊಸಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮೂಡನಿಡಂಬೂರು ಗ್ರಾಮದ ರಿಬ್ಕೋ ಸ್ಟೀಲ್ ಟ್ರೇಡರ್ಸ್ ಹಿಂಬದಿ ನಿವಾಸಿ ಫಕೀರವ್ವ ಎಂಬವರ ಮಗಳು ಹುಲಿಗಮ್ಮ (20) ಎಂಬಾಕೆ ಮೇ 17ರಂದು ಉಡುಪಿ ನಗರದ ಬ್ಯಾಂಕಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.