ಸಿಖ್ ವ್ಯಕ್ತಿಯ ಮೇಲೆ ಹಲ್ಲೆಗೈದವರಿಗೆ ಜೈಲು ಶಿಕ್ಷೆ

Update: 2017-05-20 15:54 GMT

ಕ್ಯಾಲಿಫೋರ್ನಿಯ, ಮೇ 20: ಕಳೆದ ಸೆಪ್ಟೆಂಬರ್‌ನಲ್ಲಿ ಕ್ಯಾಲಿಫೋರ್ನಿಯ ನಗರದ ರಿಚ್ಮಂಡ್ ಎಂಬಲ್ಲಿಯ ಹೆದ್ದಾರಿಯಲ್ಲಿ ಸಿಖ್ ವ್ಯಕ್ತಿಯ ಮೇಲೆ ಹಲ್ಲೆನಡೆಸಿ ಜನಾಂಗೀಯ ನಿಂದನೆ ನಡೆಸಿದ ಇಬ್ಬರಿಗೆ ನ್ಯಾಯಾಲಯವು ಜೈಲುಶಿಕ್ಷೆ ವಿಧಿಸಿದೆ.

ಮಾನ್‌ಸಿಂಗ್ ಖಾಲ್ಸ ಎಂಬವರ ಮೇಲೆ ಹಲ್ಲೆ ನಡೆಸಿದ್ದ ಕಾಲ್ಟನ್ ಟೈ ಮತ್ತು ಚೇಸ್ ಲಿಟಲ್ ಎಂಬ ದುಷ್ಕರ್ಮಿಗಳು ಮಾನ್‌ಸಿಂಗ್ ಮೇಲೆ ಹಲ್ಲೆ ನಡೆಸಿ ಅವರನ್ನು ನೆಲಕ್ಕೆ ಕೆಡವಿದ್ದರು ಮತ್ತು ಅವರ ಟರ್ಬನ್ (ಪೇಟ)ವನ್ನು ಕಿತ್ತೆಸೆದಿದ್ದರು. ಅಲ್ಲದೆ ಅವರ ತಲೆಕೂದಲನ್ನು ಕತ್ತರಿಸಿ ಅವಾಚ್ಯವಾಗಿ ನಿಂದಿಸಿದ್ದರು . ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News