×
Ad

ಕಳವು ಪ್ರಕರಣ: ನಾಲ್ವರ ಬಂಧನ

Update: 2017-05-20 22:29 IST

ಮಂಗಳೂರು, ಮೇ 20: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಚಿನ್ನದ ಸರ ಹಾಗೂ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಹಬೀಬ್ (39), ಪುತ್ತೂರಿನ ಅಶ್ರಫ್ ಅಲಿ (30), ಹೊಸಬೆಟ್ಟುವಿನ ವಿಜಯ (27), ಫರಂಗಿಪೇಟೆಯ ಮುಹಮ್ಮದ್ ಆಸಿಫ್ (27) ಎಂದು ಗುರುತಿಸಲಾಗಿದೆ.

ಚಿನ್ನ ಕಳವು, ವಾಹನ ಕಳವು ಹಾಗೂ ಮನೆಗೆ ನುಗ್ಗಿ ಕಳವು ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು ಏಳು ಪ್ರಕರಣಗಳು ಮಂಗಳೂರು ಗ್ರಾಮಾಂತರ, ಬಜ್ಪೆ ಪೊಲೀಸ್ ಠಾಣೆ, ಉಡುಪಿ ನಗರ ಪೊಲೀಸ್ ಠಾಣೆ, ಮಣಿಪಾಲ ಪೊಲೀಸ್ ಠಾಣೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮನೆಗೆ ನುಗ್ಗಿ ಕಳವು, ಉತ್ತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು.

ಈ ಪೈಕಿ ಐದು ಚಿನ್ನದ ಸರ ಕಳವು ಪ್ರಕರಣಗಳ ಸಹಿತ ಒಟ್ಟು 7 ಪ್ರಕರಣಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಈ ಸಂಬಂಧ 4 ಲಕ್ಷ ರೂ. ವೌಲ್ಯ 122 ಗ್ರಾಂ ಚಿನ್ನ ಸಹಿತ ಕಳವಿಗೆ ಉಪಯೋಗಿಸಲಾಗಿದ್ದ ನಾಲ್ಕು ಚಕ್ರಗಳ ವಾಹನ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣಾ ಪಿಐ ಚುಲುವರಾಜ್ ಮತ್ತು ಸುರತ್ಕಲ್ ಹಾಗೂ ಮುಲ್ಕಿ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News