×
Ad

ನಿಟ್ಟೆ: ಮೇ 23-26 ಅಧ್ಯಾಪಕರಿಗಾಗಿ ಕಾರ್ಯಾಗಾರ

Update: 2017-05-20 23:41 IST

ಮಂಗಳೂರು, ಮೇ 20: ಶಿಕ್ಷಕರು ಹದಿಹರೆಯದವರನ್ನು ಸಮರ್ಪಕವಾಗಿ ಅರಿಯಲು ಹಾಗೂ ಚಿಕಿತ್ಸಾತ್ಮಕ ಸಮಾಲೋಚನೆಗೆ ಪರಿಚಯಿಸುವ ಕುರಿತು ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಯಲದಲ್ಲಿ ಮೇ 23ರಿಂದ 26ರವರೆಗೆ ಶಿಕ್ಷಕರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಯ ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥೆ ಪ್ರೊ.ಶಾಲಿನಿ ಕೆ. ಶರ್ಮರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಲಿದೆ. ಹದಿಹರೆಯದವರ ಮನೋಸ್ಥಿತಿ, ಎದು ರಿಸುವ ಸವಾಲುಗಳು, ಮಾನಸಿಕ ತೊಂದರೆಗಳನ್ನು ಗುರುತಿ ಸುವುದು ಹೇಗೆ, ಕಾಲೇಜು ಸಿಬ್ಬಂದಿ ವರ್ಗ ಇದಕ್ಕೆ ಏನು ಮಾಡಬಹುದು ಎಂಬು ದರ ಬಗ್ಗೆ ಕೇಸ್ ಸ್ಟಡೀಸ್, ಡೆಮೋಸ್, ಕಿರುಚಿತ್ರ, ಉಪನ್ಯಾಸದ ಮೂಲಕ ಸಂಪನ್ಮೂಲ ವ್ಯಕ್ತಿಗಳು ವಿವರಿಸುವರು.

 ಕಾರ್ಯಾಗಾರವನ್ನು ಬೆಂಗಳೂರಿನ ನಿಮ್ಹಾನ್ಸ್‌ನ ಸೈಕಿಯಾಟ್ರಿ ವಿಭಾಗದ ಮಾಜಿ ಮುಖ್ಯಸ್ಥ ಡಾ†.ಸಿ.ಆರ್. ಚಂದ್ರಶೇಖರ್ ಉದ್ಘಾಟಿಸುವರು. ನಿಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಾಂಶುಪಾಲ ಡಾ†. ನಿರಂಜನ್‌ಎನ್.ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News