×
Ad

ಮುಂಬೈಯ ಕೊಳಕು ಬೀಚ್‌ಗೆ ಕೊನೆಗೂ ಸ್ವಚ್ಛತೆಯ ಭಾಗ್ಯ

Update: 2017-05-21 10:29 IST

ಮುಂಬೈ, ಮೇ 21: ಮುಂಬೈ ಮಹಾನಗರದ ಅತ್ಯಂತ ಕೊಳಕು ಬೀಚ್ ಎಂದು ಕುಖ್ಯಾತಿ ಪಡೆದಿದ್ದ ವರ್ಸೋವಾ ಬೀಚ್ ದೇಶದ ಶ್ರೀಮಂತ ನಗರಪಾಲಿಕೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ಹಾಗೂ ಸ್ಥಳೀಯ ನಾಗರಿಕರ 85 ವಾರಗಳ ನಿರಂತರ ಶ್ರಮದ ಫಲವಾಗಿ ಬೀಚ್‌ನ್ನು ಸ್ವಚ್ಛಗೊಳಿಲಾಗಿದ್ದು, ಐದು ಮಿಲಿಯನ್ ಕೆಜಿ ತೂಕದಷ್ಟು ಪ್ಲಾಸ್ಟಿಕ್ ಹಾಗೂ ಕಸಕಡ್ಡಿಗಳನ್ನು ಹೊರ ಹಾಕಲಾಗಿದೆ.

ಇದೀಗ ಬೀಚ್ ಹಿಂದಿಗಿಂತಲೂ ಹೆಚ್ಚು ಸ್ವಚ್ಛವಾಗಿದ್ದು, ಸ್ಥಳೀಯರು ಮಾತ್ರವಲ್ಲ, ಬಾಲಿವುಡ್ ನಟರು ಹಾಗೂ ಪ್ಲಾಸ್ಟಿಕ್ ಸಂಸ್ಥೆಗಳು ಬೀಚ್‌ನ ಸ್ವಚ್ಛತೆಗೆ ಕೈಜೋಡಿಸಿದ್ದವು.

 ಬಾಂಬೆ ಹೈಕೋರ್ಟ್‌ನ ವಕೀಲ 33ರ ವರ್ಷದ ವಕೀಲ ಅಫ್ರೋಝ್ ಶಾ ಸ್ವಯಂಸೇವಕರ ಶಿಬಿರಗಳನ್ನು ಆಯೋಜಿಸಿ ಬೀಚ್ ಸ್ವಚ್ಛಗೊಳಿಸಲು ಮುಂಚೂಣಿಯಲ್ಲಿ ನಿಂತು ಸಹಕರಿಸಿದ್ದರು. ವರ್ಸೋವಾ ಬೀಚ್‌ನ್ನು ಸ್ವಚ್ಛಗೊಳಿಸಲು ಯಶಸ್ವಿಯಾಗಿರುವ ಶಾ ನಗರದ ಇನ್ನಿತರ ಬೀಚ್‌ಗಳನ್ನು ಕೊಳಕುಮುಕ್ತಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News