ಒಡಿಶಾದ ಬಿಸಿಲ ಶಾಖಕ್ಕೆ ರಸ್ತೆಯಲ್ಲೇ ಆಮ್ಲೇಟ್ ರೆಡಿ!
ಹೊಸದಿಲ್ಲಿ, ಮೇ 21: ಒಡಿಶಾದ ಕೆಲವು ಸ್ಥಳಗಳಲ್ಲಿನ ಉಷ್ಣಾಂಶದ ಮಟ್ಟ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಬಿಸಿ ಗಾಳಿ ಬೀಸುತ್ತಿದೆ. ಬಿಸಿಲ ಶಾಖವನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ರಸ್ತೆಯಲ್ಲೇ ಆಮ್ಲೆಟ್ ತಯಾರಿಸಿದ್ದು, ಇದು ಆ ಪ್ರದೇಶದ ಗಂಭೀರ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ.
ಒಡಿಶಾದ ಟಿಟ್ಲಾಗರ್‌ನಲ್ಲಿ ರಸ್ತೆಯಲ್ಲೇ ವ್ಯಕ್ತಿಯೊಬ್ಬ ಬಾಣಲೆಯೊಂದರಲ್ಲಿ ಮೊಟ್ಟೆಯೊಂದನ್ನು ಒಡೆದು ಹಾಕಿದ. ಸ್ಟೋವ್ ಸಹಿತ ಯಾವುದರ ಸಹಾಯವಿಲ್ಲದೆ ಒಂದೇ ನಿಮಿಷದಲ್ಲಿ ಆಮ್ಲೇಟ್ ತಯಾರಾಗಿದೆ
ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ ಒಡಿಶಾದ ಟಿಟ್ಲಾಗರ್‌ನ ಉಷ್ಣಾಂಶವು 45.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ವ್ಯಕ್ತಿಯೊಬ್ಬ ಬಿಸಿಲ ಶಾಖದಲ್ಲಿ ಆಮ್ಲೆಟ್ ತಯಾರಿ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದನ್ನು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
#WATCH Man cooks an egg on the road in Titalgarh(Odisha) to show the intense heat wave in the area pic.twitter.com/yPJFQOl1Kz
— ANI (@ANI_news) May 19, 2017