ಮಂಗಳೂರು: ಸ್ಕೈ ಕಾರ್ಸ್ ಅಕ್ಸೆಸ್ಸರೀಸ್ ಉದ್ಘಾಟನೆ
Update: 2017-05-21 13:45 IST
ಮಂಗಳೂರು, ಮೇ 21: ನಗರದ ಮಂಗಳಾದೇವಿ ರಸ್ತೆಯಲ್ಲಿರುವ ಸಂಸ್ಕೃತಿ ಲ್ಯಾಂಡ್ ಟ್ರೇಡರ್ಸ್ ಕಟ್ಟಡದಲ್ಲಿ ಪ್ರಾರಂಭವಾದ ಕಾರುಗಳ ಆಕ್ಸೆಸ್ಸರೀಸ್ ಮಳಿಗೆ ‘ಸ್ಕೈ ಕಾರ್ಸ್’ ಇತ್ತೀಚೆಗೆ ಉದ್ಘಾಟನೆಗೊಂಡಿತು.
ನೂತನ ಮಳಿಗೆಯನ್ನು ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ ಉದ್ಘಾಟಿಸಿದರು. ಸ್ಥಳೀಯ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ಮುಸ್ಲಿಮ್ ಲೇಖಕರ ಸಂಘದ ಉಪಾಧ್ಯಕ್ಷ ಬಿ.ಎ.ಮುಹಮ್ಮದ್ ಅಲಿ, ಸಿಂಡಿಕೇಟ್ ಬ್ಯಾಂಕಿನ ಮೇನೆಜರ್ ಮನು ಸ್ಯಾಮ್‌ವೆಲ್, ಯೂಸುಫ್ ಉಚ್ಚಿಲ್, ಅಹ್ಮದ್ ರೋಷನ್ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಅಬ್ದುಲ್ ಸಮದ್ ಸ್ವಾಗತಿಸಿ, ವಂದಿಸಿದರು.
ನೂತನ ಮಳಿಗೆಯು ವಿವಿಧ ವಿನ್ಯಾಸಗಳ ಮ್ಯಾಗ್ ವ್ಹೀಲ್‌ಗಳು, ಸಂಗೀತ ಪ್ರೀಯರಿಗಾಗಿ ವಿವಿಧ ಕಂಪೆನಿಗಳ ಮ್ಯೂಸಿಕ್ ಸಿಸ್ಟಂಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ ಹಾಗೂ ಎಲ್ಲಾ ಬಗೆಯ ಕಾರುಗಳನ್ನು ಸುಂದರವಾಗಿ ಕಾಣುವಂತೆ ಮಾಡುವ ಸಾಮಗ್ರಿಗಳು ಇಲ್ಲಿ ಲಭ್ಯ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.