‘ಶಾಲಿಮಾರ್ ಈಡನ್’ ಸಮುಚ್ಚಯಕ್ಕೆ ಶಿಲಾನ್ಯಾಸ
ಮಂಗಳೂರು, ಮೇ 19: ಶಾಲಿಮಾರ್ ರಿಯಲ್ಟಿ ಹೋಲ್ಡಿಂಗ್ಸ್ ಸಂಸ್ಥೆಯ ವತಿಯಿಂದ ನಗರದ ಪಾಂಡೇಶ್ವರದಲ್ಲಿ ನಿರ್ಮಿಸಲು ದ್ದೇಶಿಸಿರುವ ‘ಶಾಲಿಮಾರ್ ಈಡನ್’ ಸಮುಚ್ಚಯಕ್ಕೆ ರವಿವಾರ ಶಿಲಾನ್ಯಾಸ ನೆರವೇರಿತು.
ಕಾರ್ಯಕ್ರಮದಲ್ಲಿ ಮೂಡ ಅಧ್ಯಕ್ಷ ಸುರೇಶ್ ಬಳ್ಳಾಲ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ, ಸಂಸ್ಥೆಯ ನಿರ್ದೇಶಕರಾದ ಬಶೀರ್ ಅಹ್ಮದ್, ಅಬ್ದುರ್ರಹ್ಮಾನ್, ಎಂ.ಅಬ್ದುಲ್ ಖಾದರ್ ಮಂಗಳೂರು ಮತ್ತು ಕೆ.ಯೂಸುಫ್ ಸೂರಿಬೈಲ್, ಹಸೈನಾರ್ ಹಾಜಿ, ಅಬ್ದುರ್ರಹೀಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಬಳ್ಳಾಲ್, ಬೆಳೆಯುತ್ತಿರುವ ಮಂಗಳೂರಿಗೆ ಕಟ್ಟಡಗಳ ನಿರ್ಮಾಣವು ನಗರವನ್ನು ಇನ್ನಷ್ಟು ಚೆಂದವನ್ನಾಗಿ ಮಾಡಿಸಿದೆ. ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣದಲ್ಲಿ ನಗರಕ್ಕೆ ಶಾಲಿಮಾರ್ ಸಂಸ್ಥೆಯು ನೀಡಿರುವ ಕೊಡುಗೆ ಅಪಾರವಾಗಿದೆ. ಸಂಸ್ಥೆಯಿಂದ ಇನ್ನಷ್ಟು ಕಟ್ಟಡಗಳು ಬರಲಿ ಎಂದು ಶುಭ ಹಾರೈಸಿದರು.
ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ಜಿಎಸ್‌ಟಿ (ಸರಕು ಸೇವಾ ತೆರಿಗೆ) ರೇರಾ (ಭೂ ವ್ಯವಹಾರ ನಿಯಂತ್ರಣ ಕಾಯ್ದೆ) ಹೊಸ ಕಾಯ್ದೆಯಿಂದಾಗಿ ಫ್ಲಾಟ್‌ಗಳ ದರಗಳು ಇನ್ನೂ ಹೆಚ್ಚಾಗಲಿವೆ. ಇದು ಮುಂದಿನ ಜುಲೈ ತಿಂಗಳಿನಿಂದ ಜಾರಿಯಾಗಲಿದ್ದು, ಫ್ಲಾಟ್‌ಗಳ ಖರೀದಿಯಲ್ಲಿ ಗ್ರಾಹಕರಿಗೆ ಸ್ವಲ್ಪಮಟ್ಟಿನ ಹೊರ ಬೀಳಬಹುದು. ಶಾಲಿಮಾರ್ ಸಂಸ್ಥೆಯವರ ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡದ ಕಾಮಗಾರಿಯು ಶೀಘ್ರ ಪ್ರಾರಂಭಗೊಂಡು ಗ್ರಾಹಕರಿಗೆ ಸಕಾಲದಲ್ಲಿ ಹಸ್ತಾಂತರಿಸುವಂತಾಗಲಿ ಎಂದು ಹಾರೈಸಿದರು.