‘ವರ್ಣ ಡ್ರೀಮ್ಸ್‌ಗೊಂದಿಷ್ಟು ಬಣ್ಣ’ ಕ್ರೀಡಾಕೂಟ

Update: 2017-05-21 11:53 GMT

ಹೆಬ್ರಿ, ಮೇ 21: ಹೆಬ್ರಿ ಜೇಸಿಐ ಆಶ್ರಯದಲ್ಲಿ ಜೇಸಿಐ ವಲಯ 15ರ ಕ್ರೀಡಾಕೂಟ ‘ವರ್ಣ ಡ್ರೀಮ್ಸ್‌ಗೊಂದಿಷ್ಟು ಬಣ್ಣ’ ಇತ್ತೀಚೆಗೆ ಹೆಬ್ರಿಯಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಉದ್ಘಾಟಿಸಿದರು.

ಹೆಬ್ರಿ ಜೇಸಿಐ ಅಧ್ಯಕ್ಷ ಪ್ರಶಾಂತ ಪೈ, ವಲಯಾಧ್ಯಕ್ಷ ಸಂತೋಷ್, ಪುಟ್ಟಣ್ಣ ಭಟ್, ಸೆನೆಟರ್ ಸದಾನಂದ ನಾವಡ, ಸರ್ವಜ್ಞ ತಂತ್ರಿ, ಹೆಬ್ರಿ ಪ್ರಸಾದ ಶೆಟ್ಟಿ, ಎಚ್.ಯೋಗೀಶ್ ಭಟ್, ಅನಿಲ್ ಕುಮಾರ್, ಹೆಬ್ರಿ ಪ್ರಕಾಶ್ ಶೆಟ್ಟಿ, ಜೇಸಿಐ ಕಾರ್ಯದರ್ಶಿ ನಾಗೇಂದ್ರ ಉಪಸ್ಥಿತರಿದ್ದರು.

20 ಜೇಸಿಐ ಘಟಕಗಳ 150 ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News