30 ವರ್ಷಗಳ ನಂತರ ಹಳೆ ವಿದ್ಯಾರ್ಥಿಗಳ ಪುನರ್ಮಿಲನ
ಉಡುಪಿ, ಮೇ 21: 30 ವರ್ಷಗಳ ದೀರ್ಘ ಅವಧಿಯ ನಂತರ ಒಗ್ಗೂಡಿರುವ ಶಿರ್ವ ಸಂತ ಮೇರಿಸ್ ಕಾಲೇಜಿನ 1984-87ನೆ ವರ್ಷದ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ಉಡುಪಿಯ ಓಷನ್ ಪರ್ಲ್ ಹೋಟೆಲಿನಲ್ಲಿ ಜರಗಿತು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಕಾಲೇಜನಲ್ಲಿ ಅರ್ಧ ಗಂಟೆಯ ಕಾಲ ತಮ್ಮ ಹಳೆಯ ಜಾಗದಲ್ಲಿ ಕುಳಿತು ಆಗಿನ ಉಪನ್ಯಾಸಕ ಪ್ರೊ.ರೊನಾಲ್ಡ್ ಮೊರಾಸ್ ರವರ ಭೋದನೆಯನ್ನು ಆಲಿಸಿ ಹಳೆಯ ದಿನವನ್ನು ನೆನಪಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಗಿನ ಉಪನ್ಯಾಸಕರಾದ ಪ್ರೊ.ಗೋಪಾಲಕೃಷ್ಣ ಸಾಮಗ, ಪ್ರೊ.ಶ್ಯಾಮ್ ಭಟ್, ಪ್ರೊ.ಪಾಸ್ಕಲ್ ಡೇಸಾ, ವೇಣುಗೋಪಾಲ್, ಪ್ರೊ.ರತ್ನಾವತಿ, ಪ್ರೊ.ನಿರ್ಮಲ ಹಾಗು ಕಚೇರಿ ಸಿಬ್ಬಂದಿಗಳಾದ ಗಿಲ್ಬರ್ಟ್ ಮತ್ತು ಲಾರೆನ್ಸ್ ಅವರನ್ನು ಗೌರವಿಸಲಾಯಿತು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಟ್ಟು 50 ಹಳೆ ವಿದ್ಯಾರ್ಥಿ ಗಳು ಕೊಲ್ಲಿ ರಾಷ್ಟ್ರ, ಕೆನಡಾ, ಅಮೆರಿಕಾ, ಮುಂಬೆ, ಪುಣೆ, ಮೈಸೂರುಗಳಿಂದ ಆಗಮಿಸಿದ್ದರು.
ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಜೂಲಿಯಾನ, ಕೃಷ್ಣರಾಜ್, ಪ್ರಕಾಶ್ ಶೆಟ್ಟಿ, ಮಕರಂದ ಶೆಟ್ಟಿ, ಮಹೇಶ್ ಹೆಗ್ಡೆ ಕೂಡ ಭಾಗವಹಿಸಿದ್ದರು. ಕಾಲೇಜನ ಈಗಿನ ಪ್ರಾಂಶುಪಾಲ ಪ್ರೊ.ರಾಜನ್, ಸಂತ ಮೇರಿಸ್ ಜೂನಿಯರ್ ಕಾಲೇಜಿನ ನಿವೃತ ಪ್ರಾಂಶುಪಾಲ ಅಲ್ಬನ್ ರೋಡ್ರಿ ಗಸ್ ಶುಭ ಹಾರೈಸಿದರು.
ಕಾರ್ಯಕ್ರಮದ ಸ್ಮರಣಿಯವಾಗಿ ಶಂಕರಪುರದ ವಿಶ್ವಾಸದ ಮನೆ ಧನಸಹಾಯ ನೀಡಲಾಯಿತು. ಹಳೆ ವಿದ್ಯಾರ್ಥಿ ಸಂತೊಷ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನೆಲ್ಲಿ ಡಿಸೋಜ ಮನೋರಂಜನೆಯ ಅಂಗವಾಗಿ ವಿವಿಧ ಆಟಗಳನ್ನು ನಡೆಸಿಕೊಟ್ಟರು, ಹೂಬರ್ಟ್ ಫೆರ್ನಾಂಡಿಸ್ ವಂದಿಸಿದರು. ಡಾ.ಡೆನಿಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಕಾಪು ಮತ್ತು ಅನ್ವರ್ ಸಾಹೆಬ್ ಕಟಪಾಡಿ ಕಾರ್ಯಕ್ರಮ ಸಂಘಟಿಸಿದರು.