ಮೈ ನವೀರೇಳಿಸುವ ಸಾಹಸ ಪ್ರದರ್ಶನಕ್ಕೆ ಸಾಕ್ಷಿಯಾದ 'ಆಳ್ವಾಸ್ ಮೋಟೋರಿಗ್-2017'

Update: 2017-05-21 14:14 GMT

ಮೂಡುಬಿದಿರೆ, ಮೇ 21: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ 'ಆಳ್ವಾಸ್ ಮೋಟೋರಿಗ್-2017' ಆಟೋ ಎಕ್ಸ್ ಪೋ, ಸಾಹಸ ಪ್ರದರ್ಶನ ಮಿಜಾರಿನ ಶೋಭಾವನದಲ್ಲಿ ರವಿವಾರ ನಡೆಯಿತು.

200ಕ್ಕೂ ಅಧಿಕ ದ್ವಿಚಕ್ರ ವಾಹನ, ಕಾರುಗಳು ಪ್ರದರ್ಶನಗೊಂಡಿತು. ಸೂಪರ್ ಬೈಕ್ಸ್, ಸೂಪರ್ ಕಾರು, ಲಕ್ಸುರಿ ಕಾರು, ವಿಂಟೇಜ್ ಕಾರು ಪ್ರದರ್ಶನವು ಗಮನಸೆಳೆಯಿತು.

ಅಂತಾರಾಷ್ಟ್ರೀಯ ಖ್ಯಾತಿಯ ಗೌರವ್ ಖಾತ್ರಿ ಜೈಪುರ ಅವರಿಂದ ಫ್ರೀ ಸ್ಟೈಲ್ ಜಂಪ್ ಮೋಟೋರಿಗ್‍ನ ವಿಶೇಷ ಆಕರ್ಷಣೆ ಯಾಗಿತ್ತು. ನ್ಯಾಷನಲ್ ಫ್ರೀ ಸ್ಟೈಲ್ ಮೋಟರ್‍ ಸ್ಪೋರ್ಟ ರೈಡರ್ ಗೌರವ್ ಖಾತ್ರಿ ಅವರು 75 ಅಡಿ ಉದ್ದಕ್ಕೆ ಐದು ಬಸ್‍ಗಳ ಮೇಲಿನಿಂದ ಜಿಗಿದು ದಾಖಲೆಯ ಪ್ರದರ್ಶನ ನೀಡಿದರು. ಭಾರತದಲ್ಲಿ ಬಸ್ ಮೇಲಿನಿಂದ ಫ್ರೀ ಸ್ಟೆಲ್ ಜಂಪ್ ಮಾಡಿದ ಅಪರೂಪ ಕ್ಷಣಕ್ಕೆ ಶೋಭಾವನ ಸಾಕ್ಷಿಯಾಯಿತು. ಗೌರವ್ ಕಾರುಗಳ ಮೇಲೆಯೂ ಜಿಗಿದು ಸಾಹಸವನ್ನು ಪ್ರದರ್ಶಿಸಿದರು.

ಇಂಡಿಯನ್ ಮೋಟಾರ್ ರ್ಯಾಲಿ ಸೂಪರ್ ಕ್ರಾಸ್ ಚಾಂಪಿಯನ್ ಅದ್ನಾನ್ ಹಾಗೂ ಸುದೀಪ್ ಕೊಠಾರಿಯವರಿಂದ ಸೂಪರ್ ಕ್ರಾಸ್ ಸಿಕ್ವೇನ್ಸ್ ಸ್ಟಂಟ್‍ಗಳು ನಡೆಯಿತು. ಎಕ್ಸೋಟಿಕ್ ಹಾಗೂ ಪ್ರೀಮಿಯಮ್ ಕಾರುಗಳ ರ್ಯಾಂಪ್  ಷೋ. ಮಂಗಳೂರಿನ ಇಂಡಿಯನ್ ರ್ಯಾಲಿ ಚಾಂಪಿಯನ್ ಅರ್ಜುನ್ ರಾವ್ ಹಾಗೂ ಇಂಡಿಯನ್ ರ್ಯಾಲಿ ಚಾಂಪಿಯನ್ ರಾಹುಲ್ ಕಾಂತರಾಜ್‍ರಿಂದ ರ್ಯಾಲಿ ಸಿಕ್ವೇನ್ಸ್ ಸ್ಟಂಟ್, ಉಡುಪಿಯ ಹಾಟ್ ಪಿಸ್ಟನ್ಸ್ ಗ್ರೂಪಿನಿಂದ ದ್ವಿಚಕ್ರವಾಹನಗಳಿಂದ ಫ್ರೀ ಸ್ಟೈಲ್ ಸ್ಟಂಟ್‍ಗಳು ನಡೆಯಿತು.

ಟಿಎಎಸ್ಸಿ, ಐಎಂಎಸ್ಸಿ, ಬೆದ ಅಡ್ವೆಂಚರ್ಸ್ ಕ್ಲಬ್, ಕೋಸ್ಟಲ್ ರೈಡರ್ಸ್, ಕೆಎಲ್14 ಹಾಗೂ ಟೀಮ್ ಬೆದ್ರ ಯುನೈಟೆಡ್ ಇವರುಗಳ ಸಹಕಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಅಧಾನಿ ಯುಪಿಸಿಎಲ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಎಂ ಕಿಶೋರ್ ಆಳ್ವ ಉದ್ಘಾಟಿಸಿದರು. ಕೆಎಲ್14 ನೇತೃತ್ವ ವಹಿಸಿದ್ದ ಮೂಸ ಶರೀಫ್, ಇಂಡಿಯನ್ ರ್ಯಾಲಿ ಚಾಂಪಿಯನ್ ಅಶ್ವಿನ್ ನಾಯ್ಕ, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಮೂಡುಬಿದಿರೆಯ ಉದ್ಯಮಿ ಅಬುಲ್ ಆಲಾ ಪುತ್ತಿಗೆ, ಮಂಗಳೂರಿನ ಮಾಂಡವಿ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಸಂಜಯ್ ರಾವ್, ವಿಜ್ಞಾನಿ ಡಾ. ಹರೀಶ್ ಭಟ್, ನಿಶ್ಮಿತಾ ಗ್ರೂಫ್ಸ್ ಮಾಲಕ ನಾರಾಯಣ ಪಿ.ಎಂ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಮೋಟೊರಿಗ್ ಸಂಯೋಜಕ ಮುದ್ದುಕೃಷ್ಣ, ಅಕ್ಷಯ್ ಜೈನ್ ಉಪಸ್ಥಿತರಿದ್ದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಟಿಎಎಸ್ಸಿ, ಐಎಂಎಸ್ಸಿ, ಬೆದ್ರ ಆಂಡ್ವೆಂಚರಸ್ ಕ್ಲಬ್, ಕೋಸ್ಟಲ್ ರೈಡರ್ಸ್, ಕೆಎಲ್14 ಹಾಗೂ ಟೀಮ್ ಬೆದ್ರ ಯುನೈಟೆಡ್ ಸಹಕಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News