ನೂತನ ‘ಎಚ್‌ಎನ್‌ಸಿ ಕ್ಲಿನಿಕ್’ ಮಂಗಳೂರು ಶಾಖೆ ಉದ್ಘಾಟನೆ
ಮಂಗಳೂರು, ಮೇ 21: ಕಳೆದ 4 ವರ್ಷಗಳಿಂದ ದುಬೈನಲ್ಲಿ ಕಾರ್ಯಾಚರಿಸುತ್ತಿರುವ ಎಚ್‌ಎನ್‌ಸಿ ಕ್ಲಿನಿಕ್‌ನ ಮಂಗಳೂರು ಶಾಖೆಯು ನಗರದ ಹೈಲ್ಯಾಂಡ್-ಫಳ್ನೀರ್ ರಸ್ತೆಯಲ್ಲಿರುವ ಫಳ್ನೀರ್ ಹೆಲ್ತ್ ಸೆಂಟರ್‌ನಲ್ಲಿ ರವಿವಾರ ಉದ್ಘಾಟನೆಗೊಂಡಿತು.
ನಿಟ್ಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಶಾಂತರಾಮ ಶೆಟ್ಟಿ ನೂತನ ಕ್ಲಿನಿಕ್‌ನ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್, ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂದಿರುವ ಮಂಗಳೂರಿನವರಿಗೆ ಇನ್ನೊಂದು ಕ್ಲಿನಿಕ್‌ನ್ನು ಪರಿಚಯಿಸುತ್ತಿರುವ ಎಚ್‌ಎನ್‌ಸಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇವರಿಂದ ಸಮಾಜಕ್ಕೆ ಉತ್ತಮ ಸೇವೆ ಲಭಿಸುವಂತಾಗಲಿ ಎಂದು ಹಾರೈಸಿದರು.
ನಗರದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಂ. ವೆಂಕಟ್ರಾಯ ಪ್ರಭು ನೂತನ ಎಚ್‌ಎನ್‌ಸಿ ಕ್ಲಿನಿಕ್‌ಗೆ ಶುಭ ಹಾರೈಸಿದರು.
ಎಚ್‌ಎನ್‌ಸಿ ಹೆಲ್ತ್ ಕೇರ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸಿಇಒ ಡಾ. ಶಾನಿತ್ ಮಂಗಲಟ್ ಅಧ್ಯಕ್ಷತೆ ವಹಿಸಿದ್ದರು. ಗ್ರೂಪ್‌ನ ವೈದ್ಯಕೀಯ ನಿರ್ದೇಶಕ ಡಾ. ಮುಹಮ್ಮದ್ ಸಲೀಂ, ಯೆನೆಪೊಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್, ಎ.ಜೆ.ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಡೀನ್ ಡಾ.ಅಶೋಕ್ ಹೆಗ್ಡೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಪ್ರಕಾಶ್ ಆಲ್ವಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಘಟಕದ ಕೋಶಾಧಿಕಾರಿ ಡಾ. ಜಿ.ಕೆ.ಭಟ್ ಸಂಕಬಿತಿಲು, ಯೆನೆಪೊಯ ಜಾವೆದ್, ಶಿಜಾಸ್ ಮಂಗಲಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಚ್‌ಎನ್‌ಸಿ ದುಬೈ ಕ್ಲಿನಿಕ್‌ನ ಮಂಗಳೂರು ಶಾಖೆಯ ಬ್ರೋಷರ್‌ನ್ನು ಬಿಡುಗಡೆ ಮಾಡಲಾಯಿತು.