ಟ್ರಂಪ್ ಅಧ್ಯಕ್ಷರಾಗುವಲ್ಲಿ 'ಟ್ವಿಟರ್' ಪಾತ್ರ ತಪ್ಪಾಯಿತು ಎಂದ ಸಹ ಸಂಸ್ಥಾಪಕ

Update: 2017-05-21 15:07 GMT

ವಾಶಿಂಗ್ಟನ್, ಮೇ 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವಂತೆ ಅವರನ್ನು ಅಧ್ಯಕ್ಷರಾಗಿಸಲು ಸಾಮಾಜಕ ಜಾಲ ತಾಣ ‘ಟ್ವಿಟರ್’ ಸಹಾಯ ಮಾಡಿದ್ದರೆ ‘ನಮ್ಮಿಂದ ತಪ್ಪಾಗಿದೆ’ ಎಂದು ‘ಟ್ವಿಟರ್’ನ ಸಹ ಸಂಸ್ಥಾಪಕ ಇವಾನ್ ವಿಲಿಯಮ್ಸ್ ಹೇಳಿದ್ದಾರೆ.

ಟ್ರಂಪ್ ತನ್ನ ‘ಜನಮರುಳು’ ಕಾರ್ಯಗಳಲ್ಲಿ ಯಶಸ್ಸು ಪಡೆಯುವಲ್ಲಿ ‘ಟ್ವಿಟರ್’ನ ಪಾತ್ರವಿದ್ದರೆ, ‘ಅದೊಂದು ಕೆಟ್ಟ ಸಂಗತಿಯಾಗಿದೆ’ ಎಂದು ‘ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಇವಾನ್ ಹೇಳಿದ್ದಾರೆ.

ತಾನು ಅಮೆರಿಕದ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗುವಲ್ಲಿ ಟ್ವಿಟರ್‌ನ ಪಾತ್ರ ದೊಡ್ಡದಿದೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News