7 ದಿನಗಳಲ್ಲಿ ಅಧಿಕಾರ ತ್ಯಜಿಸಿ ಪಾಕ್ ಪ್ರಧಾನಿಗೆ ವಕೀಲರ ಒತ್ತಾಯ

Update: 2017-05-21 15:20 GMT

ಲಾಹೋರ್, ಮೇ 21: ಪನಾಮ ದಾಖಲೆ ಬಹಿರಂಗ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಲು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ಗೆ ಆ ದೇಶದ ವಕೀಲರು ಏಳು ದಿನಗಳ ಗಡುವು ನೀಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಪ್ರಧಾನಿ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರ ಸಂಘ ಮತ್ತು ಲಾಹೋರ್ ಹೈಕೋರ್ಟ್ ವಕೀಲರ ಸಂಘ ಈ ಜಂಟಿ ಕರೆಯನ್ನು ನೀಡಿವೆ.

‘‘ಪನಾಮ ದಾಖಲೆ ಬಹಿರಂಗ ಹಿನ್ನೆಲೆಯಲ್ಲಿ ದೇಶವನ್ನಾಳಲು ನವಾಝ್ ಶರೀಫ್ ಹೊಂದಿರುವ ನೈತಿಕತೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ, ನವಾಝ್ ಶರೀಫ್ ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ನಿಲುವನ್ನು ಎರಡೂ ವಕೀಲ ಸಂಘಗಳು ಹೊಂದಿವೆ. ಹಾಗಾಗಿ, ನವಾಝ್ ಶರೀಫ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು’’ ಎಂದು ಉಭಯ ವಕೀಲ ಸಂಘಗಳು ಹೇಳಿವೆ.

ಲಾಹೋರ್‌ನಲ್ಲಿ ನಡೆದ ಸಭೆಯ ಬಳಿಕ ಈ ಸಂಘಗಳು ಜಂಟಿ ಹೇಳಿಕೆಯನ್ನು ಹೊರಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News