ಯುವತಿಯ ಅನುಮಾಸ್ಪದ ಮೃತ್ಯು: ದೂರು
Update: 2017-05-21 21:07 IST
ಹಿರಿಯಡ್ಕ, ಮೇ 21: ಬೆಳ್ಳಂಪಳ್ಳಿ ಗ್ರಾಮದ ಪುಣಚೂರು ಕಂಬಳಮಜಲು ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ವಾಗಿ ಮೃತಪಟ್ಟಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರೂರು ಗ್ರಾಮದ ಹೊಳೆಬಾಗಿಲು ನಿವಾಸಿ ಉಷಾ (25) ಮೃತರು ಎಂದು ಗುರುತಿಸಲಾಗಿದೆ.
ಇವರು ಒಂದು ವರ್ಷದ ಹಿಂದೆ ಮದುವೆಯಾಗಿ ಕಂಬಳ ಮಜಲು ಎಂಬಲ್ಲಿ ಪತಿ ಸತೀಶ ಹಾಗೂ ಅತ್ತೆ, ಮಾವರವರೊಂದಿಗೆ ವಾಸ ವಾಗಿದ್ದರು.
ಹೋಮ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಆಕೆಯೊಂದಿಗೆ ಅತ್ತೆ, ಮಾವ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಮೇ 20ರಂದು ಸಂಜೆ ಉಷಾ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಷಾಳ ಮರಣದಲ್ಲಿ ಸಂಶಯ ವ್ಯಕ್ತಪಡಿಸಿ ಆಕೆಯ ಸಹೋದರ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.