ವಿವಿಧ ಸಂಘಟನೆಗಳಿಂದ ರಕ್ತದಾನ

Update: 2017-05-21 15:58 GMT

ಉಳ್ಳಾಲ, ಮೇ 21: ಬ್ಲಡ್ ಡೋನರ್ಸ್‌ ಮಂಗಳೂರು, ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಕೆ.ಸಿ.ರೋಡ್ ಕಾಟುಂಗೆರೆ ಗುಡ್ಡೆ, ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಸೇಶನ್ ಕೆ.ಸಿ.ನಗರ, ಬದ್ರಿಯಾ ವೆಲ್ಫೇರ್ ಸೊಸೈಟಿ ಅಜ್ಜಿನಡ್ಕ ಹಾಗೂ ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜು ಸಹಕಾರದಲ್ಲಿ ರವಿವಾರ ಕೆ.ಸಿ.ರೋಡ್ ಫಲಾಹ್ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ದಂತ ವೈದ್ಯ ನಿತಿನ್ ಆಚಾರ್ಯ ಮಾತನಾಡಿದರು. ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ರಕ್ತದಾನದ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಬ್ಲಡ್ ಡೋನರ್ಸ್‌ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಸೇಶನ್ ಉಪಾಧ್ಯಕ್ಷ ಮಜೀದ್ ತಲಪಾಡಿ, ಸಲಹೆಗಾರ ಫಾರೂಕ್, ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್, ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಹ್ಮದ್ ಅಜ್ಜಿನಡ್ಕ, ಫಲಾಹ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯು.ಬಿ.ಮುಹಮ್ಮದ್, ಯಾಕೂಬ್, ನಝೀರ್ ಕೆ.ಸಿ.ನಗರ, ಬಾತಿಷ್, ರಶೀದ್, ಮುಸ್ತಫಾ ಕೆ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News