ಮಟ್ಕಾ ಜೂಜಾಟ ನಿರತ ಮೂವರ ಬಂಧನ

Update: 2017-05-21 16:02 GMT

ಮಂಗಳೂರು, ಮೇ 21: ಮಟ್ಕಾ ಅಡ್ಡೆಗೆ ದಾಳಿ ನಡೆಸಿರುವ ಬರ್ಕೆ ಠಾಣಾ ಪೊಲೀಸರು ಮಟ್ಕಾ ಅದೃಷ್ಟ ಚೀಟಿ ಆಟದಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಬಳ್ಳಾಲ್‌ಬಾಗ್‌ನ ಗಂಗಾಧರ (50), ಬಜಾಲ್ ರಸ್ತೆಯ ಎಕ್ಕಾರಿನ ಪ್ರವೀಣ್ (35), ಪಚ್ಚನಾಡಿ ದೇವಿನಗರದ ಭಾಸ್ಕರ ಶೆಟ್ಟಿ (61) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬರ್ಕೆ ಠಾಣಾ ಪಿಎಸ್‌ಐ ನರೇಂದ್ರ ಅವರು ಸಿಬ್ಬಂದಿಗಳೊಂದಿಗೆ ಮಟ್ಕಾ ಆಟದ ಅಡ್ಡೆಗೆ ದಾಳಿ ನಡೆಸಿದಾಗ ಮೂವರು ಮಟ್ಕಾ ಅದೃಷ್ಟ ಚೀಟಿ ಎತ್ತುವ ಆಟದಲ್ಲಿ ನಿರತರಾಗಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಅವರಿಂದ ಮಟ್ಕಾ ಸಂಖ್ಯೆ ಬರೆದ ಚೀಟಿಗಳು, 20,460 ನಗದು, 5 ಮೊಬೈಲ್ ಫೋನ್ ಗಳು, 1 ಸ್ಯಾಮ್‌ಸಂಗ್ ಟ್ಯಾಬ್ ಸ್ವಾಧೀನಪಡಿಸಿಕೊಂಡಿದ್ದಾರೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ವೌಲ್ಯ 48,360 ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ್‌ ನಾಯಕ್ ಅವರ ಮಾರ್ಗದರ್ಶನದಲ್ಲಿ ಹಾಗೂ ಬರ್ಕೆ ಠಾಣೆಯ ಅಪರಾಧ ವಿಭಾಗದ ಎಸ್‌ಐ ನರೇಂದ್ರ ಹಾಗೂ ಹೆಡ್‌ಕಾನ್ಸ್‌ಟೆಬಲ್‌ಗಳಾದ ಗಣೇಶ್, ರಾಜೇಶ್ ಅತ್ತಾವರ, ಸಿಪಿಸಿಗಳಾದ ಕಿಶೋರ್ ಪೂಜಾರಿ, ನಾಗರಾಜ್, ಮಹೇಶ್ ಅವರು ಆರೋಪಿಗಳ ಪತ್ತೆಗೆ ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News