ಕಾಟಿಪಳ್ಳದಲ್ಲಿ ರಕ್ತದಾನ ಶಿಬಿರ
Update: 2017-05-22 15:31 IST
ಮಂಗಳೂರು, ಮೇ 22: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳ ಇದರ ಜಂಟಿ ಆಶ್ರಯದಲ್ಲಿ ಯೆನೆಪೊಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಕಾಟಿಪಳ್ಳದ ಜಾಸ್ಮಿನ್ ಹಾಲ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.
ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳ ಇದರ ಮಾಜಿ ಅಧ್ಯಕ್ಷ ಸಲೀಂ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕಮದಲ್ಲಿ ಸತ್ತಾರ್ ಕೃಷ್ಣಾಪುರ, ಹಸನ್ ಶರೀಫ್, ಮುಹಮ್ಮದ್ ತಮೀಮ್ ಕಾಟಿಪಳ್ಳ, ಮೆಹ್ತಾಬ್ ಕೈಕಂಬ, ನವಾಫ್ ಕಾಟಿಪಳ್ಳ, ಕಬೀರ್ ಸಅದಿ, ಸಹದ್ ವಳಚ್ಚಿಲ್, ಇರ್ಝಾನ್ ಅಡ್ಡೂರು, ನಿಝಾಂ ಅಡ್ಡೂರು ಮೊದಲಾದವರು ಉಪಸ್ಥಿತರಿದ್ದರು.