×
Ad

ಬಂಟ್ವಾಳ ತಾಲೂಕು ಎಸೆಸೆಲ್ಸಿ ಟಾಪರ್ಸ್ ಗೆ ಎಸ್ ಐಒ ಅಭಿನಂದನೆ

Update: 2017-05-22 15:45 IST

ಬಂಟ್ವಾಳ, ಮೇ 22: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ತಾಲೂಕಿನ ನಾಲ್ವರು ವಿದ್ಯಾರ್ಥಿನಿಯರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐಒ) ಪಾಣೆಮಂಗಳೂರು ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.

625 ರಲ್ಲಿ 622 ಅಂಕ ಪಡೆದು ಬಂಟ್ವಾಳ ತಾಲೂಕಿನಲ್ಲಿ ಮೊದಲ ಸ್ಥಾನ ಪಡೆದ ಮಂಚಿ ಕುಕ್ಕಾಜೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಹಾಗೂ ಬಂಟ್ವಾಳದ ಎಸ್ ವಿ ಸ್ ಆಂಗ್ಲ ಮಾಧ್ಯಮ ಶಾಲೆಯ ಪಲ್ಲವಿ.ಡಿ. ಶೆಟ್ಟಿ, 621 ಅಂಕ ಪಡೆದು ತಾಲೂಕಿನಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ಬಂಟ್ವಾಳದ ಎಸ್ ವಿಸ್ ಆಂಗ್ಲ ಮಾಧ್ಯಮ ಶಾಲೆಯ ಮೈನಾ ಅಂಜುಮ್ ಕೆ.ಕೆ. ಹಾಗೂ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಕೆ. ಯವರ ಮನೆಗಳಿಗೆ ಎಸ್ ಐಒ ಪಾಣೆಮಂಗಳೂರು ಶಾಖೆಯ ನಿಯೋಗ ತೆರಳಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.

ಈ ಸಂದರ್ಭ ಎಸ್ ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ದಾನಿಶ್ ಪಾಣೆಮಂಗಳೂರು, ಪಾಣೆಮಂಗಳೂರು ಎಸ್ ಐಒ ಅಧ್ಯಕ್ಷ ತಮೀಝ್ ಅಲಿ ಕಾರಾಜೆ, ಎಸ್ ಐಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರು, ಮುಬಾರಿಷ್ ಚೆಂಡಾಡಿ, ಯಾಸರ್ ಅಫ್ರಿನ್, ಮುಝಮ್ಮಿಲ್ ಮಾರ್ನಬೈಲ್, ಮುತಹ್ಹರ್ ಬೋಳಂಗಡಿ, ಉಮರ್ ಅಫ್ಸಾನ್, ಆದಿಲ್, ಇಸ್ಮಾಯೀಲ್ ಮೆಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News