×
Ad

ಮದ್ಯದಂಗಡಿ ತೆರೆಯಲು ನಾಗರಿಕರಿಂದ ವಿರೋಧ: ಲಾಠಿ ಚಾರ್ಜ್

Update: 2017-05-22 17:05 IST

ಕಾಸರಗೋಡು, ಮೇ 22: ನಾಗರಿಕರ ವಿರೋಧದ ನಡುವೆಯೇ  ಉದುಮ ಮಾಂಗಾಡ್ ನಲ್ಲಿ  ಮದ್ಯದಂಗಡಿ ತೆರೆಯಲೆತ್ನಿಸಿದ ಘಟನೆ ಸೋಮವಾರ  ನಡೆದಿದ್ದು , ಪ್ರತಿಭಟನೆ ನಡೆಸಿದವರನ್ನು ಚದುರಿಸಲು  ಪೊಲೀಸರು ಲಾಠಿ ಪ್ರಹಾರ  ನಡೆಸಿದರು. ಇದರಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಬಳಿಕ ಬಲವಂತವಾಗಿ ಮದ್ಯದಂಗಡಿಯನ್ನು ತೆರೆಯಲಾಯಿತು.

ಜನವಾಸ ಸ್ಥಳದಲ್ಲಿ ಮದ್ಯದಂಗಡಿ ತೆರೆಯುವುದರ ವಿರುದ್ಧ  ಕಳೆದ  78 ದಿನಗಳಿಂದ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ನಡುವೆ  ಸೋಮವಾರ ಬೆಳಗ್ಗೆ  ಮದ್ಯ ಸಹಿತ  ಬಂದ  ಲಾರಿಯಿಂದ  ಮದ್ಯ ಇಳಿಸುತ್ತಿದ್ದಾಗ ಪ್ರತಿಭಟನಾಕಾರು ತಡೆದಿದ್ದು , ಈ ಸಂದರ್ಭದಲ್ಲಿ  ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ತಿಳಿದುಬಂದಿದೆ.

ಕಾಸರಗೋಡು ನಗರದಲ್ಲಿದ್ದ ಮದ್ಯದಂಗಡಿಯನ್ನು  ಮಾಂಗಾಡ್  ಕುಳಿಕುನ್ನುಗೆ   ಸ್ಥಳಾಂತರಿಸಲಾಗಿತ್ತು.
ಇದರ ವಿರುದ್ಧ ನಾಗರಿಕರು ಹೋರಾಟ ಸಮಿತಿ ರಚಿಸಿ ಯಾವುದೇ  ಕಾರಣಕ್ಕೆ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು . ಇದರಿಂದ  ಸೋಮವಾರ ಬೆಳಗ್ಗೆ  ಬಲವಂತವಾಗಿ ಮದ್ಯದಂಗಡಿ  ತೆರೆಯಲು  ತೀರ್ಮಾನಿಸಿದ್ದರು. ಇದರಂತೆ ಸ್ಥಳದಲ್ಲಿ ಪೊಲೀಸ್  ಬಂದೋ ಬಸ್ತ್  ಏರ್ಪಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News